ಪೈಚಾರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

0

ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಪೈಚಾರಿನಲ್ಲಿ ನ.16ರಂದು ಅಪರಾಹ್ನ ಸಂಭವಿಸಿದೆ.

ಸುಳ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ಸುಳ್ಯದ ರೋಷನ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರು ಪೈಚಾರಿನ ಸುಪ್ರೀಂ ಚಿಕನ್ ಸೆಂಟರ್ ಸಮೀಪ ನಿಯಂತ್ರಣ ಕಳೆದು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ರೋಷನ್ ಅಪಾಯದಿಂದ ಪಾರಾಗಿದ್ದಾರೆ.