ರಂಗ ನಿರ್ದೇಶಕಿ ಶ್ರೀಮತಿ ಗೀತಾ ಮುಳ್ಯರಿಗೆ`ಕರ್ನಾಟಕ ಸಾಧಕ ರತ್ನ’ ರಾಜ್ಯೋತ್ಸವ ಪ್ರಶಸ್ತಿ

0

ಬಳ್ಳಾರಿಯ ಶ್ರೀ ಮಹಾದೇವ ಎಜುಕೇಷನ್ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಬಳ್ಳಾರಿ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ರಾಜ್ಯ ಮಟ್ಟದಲ್ಲಿ ಕೊಡ ಮಾಡುವ ಕರ್ನಾಟಕ ಸಾಧಕ ರತ್ನ ಪ್ರಶಸ್ತಿಗೆ ಶ್ರೀಮತಿ ಗೀತಾ ಕುಮಾರಿ ಮುಳ್ಯ ಆಯ್ಕೆಯಾಗಿದ್ದಾರೆ.


ರಂಗಭೂಮಿ ಮತ್ತು ಹಾಸ್ಯ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.


ಅಜ್ಜಾವರ ಗ್ರಾಮದ ಮುಳ್ಯ ಜನಾರ್ದನ ನಾಯಕ್ ಹಾಗೂ ಭೂದೇವಿ ದಂಪತಿಗಳ ಪುತ್ರಿಯಾಗಿರುವ ಶ್ರೀಮತಿ ಗೀತಾರವರು ಭಗೀರಥ ಕುಮ್ಟರವರ ಪತ್ನಿ. ಮೂಡಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಂಗ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ನ.೨೬ರಂದು ಬಳ್ಳಾರಿಯ ಬಲಿಜ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.