ಪಂಜ: ತಾಲೂಕು ಹಿರಿಯರ ಕ್ರೀಡಾಕೂಟ-ಉದ್ಘಾಟನೆ

0

ಸಂಘಟನಾ ಸಮಿತಿ, ಸುಳ್ಯ, ಕಡಬ, ಪುತ್ತೂರು ತಾಲೂಕುಗಳ ಹಿರಿಯರ 10ನೇ ಕ್ರೀಡಾಕೂಟ, ಸುಳ್ಯ ತಾಲೂಕು ಹಿರಿಯರ ಕ್ರೀಡಾ ಸಂಘ ಪಂಜ ಇದರ ವತಿಯಿಂದ ತಾಲೂಕು ಹಿರಿಯರ ಕ್ರೀಡಾಕೂಟ -2023

ನ.19 ರಂದು ಮುಂಜಾನೆ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಉದ್ಘಾಟನೆ ಗೊಂಡಿತು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ ತೆಂಗಿನ ಕಾಯಿ ಒಡೆದು ಉದ್ಘಾಟಿಸಿ ಶುಭ ಹಾರೈಸಿದರು. ಸುಳ್ಯ ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ಗೌರವಾಧ್ಯಕ್ಷ ತುಕಾರಾಮ ಏನೆಕಲ್ಲು, ಸಂಘನ ಸಮಿತಿ ಅಧ್ಯಕ್ಷ ರವಿಕುಮಾರ್ ಚಳ್ಳಕೋಡಿ,ಕಡಬ ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಅಧ್ಯಕ್ಷ ಮೋಹನ ಕೆರೆಕ್ಕೋಡಿ, ಪುತ್ತೂರು ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಅಧ್ಯಕ್ಷ ಕುಶಾಲಪ್ಪ ಗೌಡ ಕರಂದ್ಲಾಜೆ, ಸಂಘಟಕರು, ಕ್ರೀಡಾ ಸ್ಪರ್ಧೆಗಳು, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತುಕಾರಾಮ ಏನೆಕಲ್ಲು ಸ್ವಾಗತಿಸಿದರು ಮತ್ತು ವಂದಿಸಿದರು.