ಪಾಲೆಪ್ಪಾಡಿ ಅಂಗನವಾಡಿಗೆ ಚಯರ್ ಕೊಡುಗೆ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಅಂಗನವಾಡಿ ಕೇಂದ್ರಕ್ಕೆ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹರೀಶ್ ರಾವ್ ಉದ್ದಂಪಾಡಿಯವರು 25 ಚಯರನ್ನು ಕೊಡುಗೆಯಾಗಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಚಯರನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯೆ ಮಮತಾ ಉದ್ದಂಪಾಡಿ,ಶಿವಪ್ರಸಾದ್ ಕಟ್ಟತ್ತಾರು,ಕುಮಾರ ಕಟ್ಟತ್ತಾರು ,ಮನೋಜ್ ಹಾಗೂ ಪುಟಾಣಿ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.