ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ: ಪುರುಷರ 2ನೇ ಕ್ವಾಟರ್ ಫೈನಲ್ ನಲ್ಲಿ ಪೆರಿಯಾರ್ ಸ್ಪೋರ್ಟ್ಸ್ ತಂಡವನ್ನು ಮಣಿಸಿ ಸೆಮಿ ಫೈನಲ್ ತಲುಪಿದ ಆಳ್ವಾಸ್ ತಂಡ

0

ಸುಳ್ಯದಲ್ಲಿ ನಡೆಯುತ್ತಿರುವ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟದ ಪುರುಷರ ಕಬ್ಬಡಿ ಪಂದ್ಯಾಟದ 2ನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪೆರಿಯಾರ್ ಸ್ಪೋರ್ಟ್ ತಂಡವನ್ನು ಆಳ್ವಾಸ್ ತಂಡ ಸೋಲಿಸಿ ಸೆಮಿ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದೆ.

ಅಂತಿಮ ಕ್ಷಣದವರೆಗೆ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯಾಟದಲ್ಲಿ ಪೆರಿಯಾರ್ ಸ್ಪೋರ್ಟ್ ಈ ರೋಡ್ ತಂಡದಲ್ಲಿ ಉತ್ತಮ ರೈಡರುಗಳಾಗಿ ಮಣಿಕಂಠ ಉತ್ತಮ ಪ್ರದರ್ಶನ ನೀಡಿದರೆ, ದಿನೇಶ್ ಕುಮಾರ್ ಉತ್ತಮ ರೈಡ್ ಗಳನ್ನು ಮಾಡಿ ಸ್ಕಿಲ್ ಗಳ ಮೂಲಕ ತಂಡದ ಹೀರೋ ಆಗಿ ಮಿಂಚಿದರು.

ಆಳ್ವಾಸ್ ಮೂಡಬಿದ್ರೆ ತಂಡದ ಆಟಗಾರ ಮೊದಲ ರೈಡ್ನಲ್ಲಿ ಮೂರು ಅಂಕಗಳನ್ನು ಪಡೆದು ಉತ್ತಮ ಪ್ರಾರಂಭ ನೀಡಿ ಕೊನೆಯ ಕ್ಷಣದವರೆಗೆ ಅದನ್ನು ಕಾಯ್ದುಕೊಂಡರು.
ಶ್ರೀನಿವಾಸ ಬಳ್ಳಾರಿ, ಮಲ್ಲಿಕಾರ್ಜುನ, ಮೋಹನ್ ಮೈಸೂರು,ಸಿದ್ದೇಶ್ ಮಿಂಚಿನ ಆಟವನ್ನು ಆಡಿ ತಂಡದ ಗೆಲುವಿಗೆ ಕಾರಣರಾದರು.

ಕೊನೆಯದಾಗಿ ಆಳ್ವಾಸ್ ತಂಡ 36-30 ಅಂಕಗಳಿಂದ ಪೆರಿಯಾರ್ ತಂಡವನ್ನು ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿತು.