ರಾಷ್ಟ್ರೀಯ ಕಬಡ್ಡಿ ಪಂದ್ಯಾಟ ಫೈನಲ್: ಬ್ಯಾಂಕ್ ಆಫ್ ಬರೋಡಾ ಮತ್ತು ಯೇನೆಪೋಯ ಯುನಿವರ್ಸಿಟಿ ಪೈಪೋಟಿಯ ಕಾದಾಟ

0

ಬ್ಯಾಂಕ್ ಆಪ್ ಬರೋಡಾ ಚಾಂಪಿಯನ್ 2023, ಯನೇಪೋಯ ಯುನಿವರ್ಸಿಟಿ -ರನ್ನರ್ ಅಪ್

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ
ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಫೈನಲ್ ಪ್ರವೇಶಿಸಿದ ಬ್ಯಾಂಕ್ ಆಫ್ ಬರೋಡಾ ಹಾಗೂ ಯೇನೆಪೋಯ ಯುನಿವರ್ಸಿಟಿ ತಂಡಗಳ ಮಧ್ಯೆ ನೇರ ಹಣಾ ಹಣಿಯು ರೋಮಾಂಚನಕಾರಿಯಾಗಿ ನಡೆಯಿತು.
ಮುಂಜಾನೆಯ ತನಕ ನಡೆ್ ಫೈನಲ್ ಪಂದ್ಯದಲ್ಲಿ ಆರಂಭದಲ್ಲಿ ಯೇನೆಪೋಯ ತಂಡವು ಮುನ್ನಡೆ ಸಾಧಿಸಿತು. ಪಂದ್ಯ ಮುಂದುವರಿದ ಹಾಗೆ ಮತ್ತೆ ಬಿ.ಒ.ಬಿ ತಂಡ ಮುನ್ನಡೆ ಕಾಯ್ದುಕೊಂಡಿತು.

ಯೇನೆಪೋಯ ತಂಡದ ಕಿರಿಯ ಆಟಗಾರ ಕೌಶಿಕ್ ರವರ ರೈಡಿಂಗ್ ತಂಡದ ನಿರ್ವಹಣೆಯಲ್ಲಿ ಚೇತರಿಕೆ ತಂದುಕೊಟ್ಟಿತು.
ಬಿ.ಒ.ಬಿ ತಂಡದ ಆಟಗಾರ ರತನ್ ರವರು ರೈಡಿಂಗ್ ನಲ್ಲಿ ಅಂಕವನ್ನು ಸೇರ್ಪಡೆಗೊಳಿಸಿದರು. ಪ್ರಥಮ ಸುತ್ತಿನಲ್ಲಿ ಅಂಕ ಪರದೆಯಲ್ಲಿ ಬಿ.ಒ.ಬಿ ತಂಡಕ್ಕೆ 23 ಹಾಗೂ ಯೇನೆಪೋಯ ತಂಡಕ್ಕೆ 19 ಅಂಕವನ್ನು ಗಳಿಸಿಕೊಂಡಿತು. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ರಣ ಕಹಳೆ ಮೊಳಗಿತು. ಯೇನೆಪೋಯ ತಂಡದ ಆಟಗಾರ ಶ್ರವಣ್ ಚತುರತೆಯ ಆಟವಾಡಿ ತಂಡದ ಮೊತ್ತ 20 ಕ್ಕೆ ಏರಿತು. ಕೊನೆಯ 5 ನಿಮಿಷಗಳು ಉಳಿದಿರುವ ಸಂದರ್ಭದಲ್ಲಿ ಯೇನೆಪೋಯ ತಂಡದಿಂದ ಬಿ.ಒ.ಬಿ ಯ ಆಟಗಾರನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಈ ವೇಳೆಗೆ 25-24 ರಲ್ಲಿ ಅಂಕವನ್ನು ‌ಕಲೆ ಹಾಕಲಾಗಿತ್ತು. ಎರಡು ತಂಡಗಳ ನಡುವೆ ಜಿದ್ದಾ ಜಿದ್ದಿನ ಪೈಪೋಟಿಯ ಪಂದ್ಯ ಮುಂದುವರೆಯಿತು. ಗ್ಯಾಲರಿಯಲ್ಲಿ ಸೇರಿದ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಹೈ ವೋಲ್ಟೆಜ್ ಫೈನಲ್ ಪಂದ್ಯವಾಗಿತ್ತು.


ಕೊನೆಯ ಒಂದು ನಿಮಿಷ ಬಾಕಿ ಉಳಿದಿರುವ ಸಮಯದಲ್ಲಿ
ಬಿ.ಒ.ಬಿ ತಂಡ 29 ಅಂಕ ಕಲೆ ಹಾಕಿ ಮುನ್ನಡೆ ಕಾಯ್ದುಕೊಂಡು ಅಂತಿಮ ಹಂತದಲ್ಲಿ ಬಿ.ಒ.ಬಿ. 31 ಅಂಕ ಪಡೆದು ಚಾಂಪಿಯನ್ ವಿನ್ನರ್ ಅಪ್ 2023 ರ ಪ್ರಶಸ್ತಿ ರೂ.1 ಲಕ್ಷ ಹಾಗೂ ಟ್ರೋಫಿ ಪಡೆದುಕೊಂಡಿತು. ಯೇನೆಪೋಯ ತಂಡ 26 ಅಂಕ ಪಡೆದು ರನ್ನರ್ ಅಪ್ ಪ್ರಶಸ್ತಿ ರೂ.65 ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತು. ತೃತೀಯ ಬಹುಮಾನ ರೂ.35 ಸಾವಿರ ಹಾಗೂ ಟ್ರೋಫಿ ಆಳ್ವಾಸ್ ಮೂಡುಬಿದಿರೆ, ಚತುರ್ಥ ಬಹುಮಾನ ರೂ.35 ಸಾವಿರ ಹಾಗೂ ಟ್ರೋಫಿ ಟಿ.ಎಂ.ಸಿ.ಥಾಣೆ ಮಹಾರಾಷ್ಟ್ರ ಪಡೆದುಕೊಂಡಿತು. ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.