ನ.ಪಂ. ಸರಬರಾಜು ‌ಮಾಡುವ ನೀರು ದುರ್ವಾಸನೆಯಿಂದ ಕೂಡಿದೆ

0

ಸುಳ್ಯ ಕಸಬಾ ಗ್ರಾಮದ 10 ನೇ ವಾರ್ಡಿನ ಅಂಗಡಿಮಠ ಪರಿಸರದಲ್ಲಿ ನ.ಪಂ. ನಿಂದ ಸರಬರಾಜು ಆಗುವ ನೀರು ದುರ್ವಾಸನೆ ಬೀರುತ್ತಿದ್ದು, ಉಪಯೋಗಿಸಲು ಸಾಧ್ಯವಾಗುತಿಲ್ಲ. ನಮಗೆ ಶುದ್ಧ ನೀರು ಒದಗಿದ ಬೇಕೆಂದು ಅಂಗಡಿಮಠ ನಿವಾಸಿ ಸತ್ಯಪ್ರಸಾದ್ ಸುಳ್ಯ‌ನಗರ ಪಂಚಾಯತ್ ಆಡಳಿತಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ನಾವು ಹಲವು ವರ್ಷಗಳಿಂದ ನಗರ ಪಂಚಾಯತ್ ನೀರು ಬಳಕೆದಾರರಾಗಿದ್ದು, ಈ ಹಿಂದೆಯೂ ಮಣ್ಣು‌ಮಿಶ್ರಿತ ನೀರು ಬರುತಿತ್ತು. ಆಗಲೂ ಮನವಿ ಮಾಡಿಕೊಂಡಿದ್ದೆವು. ಇದೀಗ ನೀರು ದುರ್ವಾಸನೆ ಬೀರುತಿದ್ದು ಬಳಕೆಗೆ ಯೋಗ್ಯವಲ್ಲದ ಸ್ಥಿತಿ ಇದೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಂಡು, ನಮಗೆ ಶುದ್ಧ ನೀರು ಕೊಡಬೇಕಾಗಿ ವಿನಂತಿಸುತ್ತೇವೆ ಎಂದು ಅವರು ಕೇಳಿಕೊಂಡಿದ್ದಾರೆ. ಮನವಿ ನೀಡುವ ಸಂದರ್ಭ ಮನೋಜ್ ಕೇರ್ಪಳ ಉಪಸ್ಥಿತರಿದ್ದರು. ಬಳಿಕ‌ ಅವರು ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ರೊಂದಿಗೆ ನ.ಪಂ. ಮುಖ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ. ದುರ್ವಾಸನೆ ಬೀರುವ ನೀರನ್ನು ಬಾಟಲಿಯಲ್ಲಿ ತುಂಬಿಸಿ ನೀಡಿದ್ದಾರೆ.