ಕೊಲ್ಲಮೊಗ್ರು : ಕಾರು – ಬೈಕ್ ಅಪಘಾತ

0

ಕೊಲ್ಲಮೊಗ್ರು ಸರ್ಕಾರಿ ಆಸ್ಪತ್ರೆ ಬಳಿ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಬೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.
ಹರಿಹರ ಪಲ್ಲತಡ್ಕ ಕಡೆಯಿಂದ ಬಂದ ಕಾರೊಂದು ರಾಂಗ್ ಸೈಡ್ ನಲ್ಲಿ ಬಂದು ಶಂಕರ ಭಟ್ ಕಟ್ಟ ಎಂಬವರ ಬೈಕ್ ಗೆ ಡಿಕ್ಕಿ ಹೊಡೆದು, ಶಂಕರ್ ಭಟ್‌ರವರು ಗಂಭೀರ ಗಾಯಗೊಂಡರು.

ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಕಾರು ಗುದ್ದಿದ ರಭಸಕ್ಕೆ ಸವಾರ ಬೈಕ್ ಸಮೇತ ಹಾರಿ ಚರಂಡಿಗೆ ಬಿದ್ದಿದ್ದರೆನ್ನಲಾಗಿದೆ.