ಐಶ್ವರ್ಯ ಆತ್ಮಹತ್ಯೆ ಪ್ರಕರಣ

0

ಮದುವೆಗದ್ದೆ ಸುಬ್ರಹ್ಮಣ್ಯ ಗೌಡರ ಪುತ್ರಿ ಐಶ್ವರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಸಿಗೊಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಕಾಪಿಲ ಗಿರಿಯಪ್ಪ ಗೌಡರ ಕುಟುಂಬದ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತ ವಾಗಿರುವುದಾಗಿ ತಿಳಿದುಬಂದಿದೆ. ಪೋಲೀಸ್ ಬಂಧನದಲ್ಲಿದ್ದ ರಾಜೇಶ್ ಕಾಪಿಲ, ಕಾಪಿಲ ಗಿರಿಯಪ್ಪ ಗೌಡ, ಸೀತಾ, ವಿಜಯ್ ಮತ್ತು ತಸ್ಮಯ್ ಇದೀಗ ನ್ಯಾಯಾಂಗ ಬಂನದಲ್ಲಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಆದೇಶಕ್ಕಾಗಿ ನ.21 ಕ್ಕೆ ಇರಿಸಲಾಗಿತ್ತು. ಜಾಮೀನು ತಿರಸ್ಕರಿಸಿ ನಿನ್ನೆ ನ್ಯಾಯಾಲಯ ಆದೇಶಗೈದಿರುವುದಾಗಿ ತಿಳಿದುಬಂದಿದೆ.