ಬಾಳುಗೋಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಬಾಳುಗೋಡು ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾಸ ಸಮಿತಿ‌ ಹಾಗೂ ಸ್ತ್ರೀ ಶಕ್ತಿ ಗುಂಪಿನ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾ ಧಿಕಾರಿಯಾದ ಶ್ರೀಮತಿ ಮೋಹಿನಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ನ.15 ರಂದು ಹಮ್ಮಿಕೊಳ್ಳಲಾಯಿತು. ಬೇಬಿ ಆತ್ಮಿಕಾರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪುಟಾಣಿಗಳು ಉದ್ಘಾಟನೆ ಗೈದರು. ಬಾಳು ಗೋಡಿ ನಲ್ಲಿ 13 ವರ್ಷದಿಂದ ಕರ್ತವ್ಯ ನಿರ್ವಹಿಸಿ ತನ್ನ ಊರಾದ ಬಾಳಿಲಕ್ಕೆ ವರ್ಗಾವಣೆಗೊಂಡ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಶ್ರೀಮತಿ ಮೋಹಿನಿಯವರಿಗೆ‌ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ಶುಭಾರವರು ಶುಭ ಹಾರೈಸಿದರು. ಪ್ರಾಥಮಿಕ ಸಮುದಾಯ ಆರೋಗ್ಯ ಅಧಿಕಾರಿಯಾದ ಶ್ರೀಮತಿ ಶ್ರುತಿಯವರು ಆರೋಗ್ಯ ಮಾಹಿತಿ ನೀಡಿದರು ಪುಟಾಣಿಗಳಾದ ಆತ್ಮಿಕ ಮತ್ತು ಶ್ರೀ ಭಾಷ್ಯ ನೆಹರುರವರ ಬಗ್ಗೆ ಭಾಷಣ ಮಾಡಿದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೋಷಕರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಆಶಾ ಕಾರ್ಯಕರ್ತೆಯಾದ ಶ್ರೀಮತಿ ಶೋಭಾರವರು ಉಪಸ್ಥಿತರಿದ್ದರು. ಪುಟಾಣಿಗಳಾದ ಶ್ರೀ ಭಾಷ್ಯ, ಆತ್ಮಿಕಾ , ವೃಷಾ, ತಸ್ಮಯಿ, ಗ್ರೀಷ್ಮ ದೇವಯ್ಯ, ಭುವನ್ ಇವರು ಪ್ರಾರ್ಥನೆ ಗೈದರು ಸ್ತ್ರೀ ಶಕ್ತಿ ಗುಂಪಿನ ಕಾರ್ಯದರ್ಶಿ ಹರ್ಷಿಣಿಯವರು ಸ್ವಾಗತಿಸಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ತೀರ್ಥ ಕುಮಾರಿಯವರು ನಿರೂಪಣೆ ಗೈದರು. ವೇದಿಕೆಯಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆಯಾದ ಅರ್ಪಿತಾ ಹಾಗೂ ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷೆ ಲಲಿತಾರವರು ಉಪಸ್ಥಿತರಿದ್ದರು.