ಹಿರಿಯರ ಕ್ರೀಡಾಕೂಟದಲ್ಲಿ ಪದ್ಮನಾಭ ಕಮಿಲ ರವರು ಚಾಂಪಿಯನ್ ಆಗಿ- ರಾಜ್ಯಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನ.19 ರಂದು ನಡೆದ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಹಿರಿಯರ 10 ನೇ ಕ್ರೀಡಾಕೂಟದಲ್ಲಿ ಪಂಜದ ಪದ್ಮನಾಭ ಕಮಿಲ ರವರು ಚಾಂಪಿಯನ್ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅವರು 100 ಮೀಟರ್ ಓಟ, ಉದ್ದ ಜಿಗಿತ , ತ್ರೀವಿಧ ಜಿಗಿತ ದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದು ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.