ಪೆರಾಜೆ :ಕೇರಳದಿಂದ ಶೈಕ್ಷಣಿಕ ಪ್ರವಾಸ ಹೊರಟಿದ್ದ ಒಂದೇ ಶಾಲೆಯ ಬಸ್ಸುಗಳ ಪರಸ್ಪರ ಡಿಕ್ಕಿ, ವಿದ್ಯಾರ್ಥಿಗಳು ಅಪಾಯದಿಂದ ಪಾರು

0

ಕೇರಳ ಮೂಲದ ಎರಡು ಬಸ್ಸು ಪೆರಾಜೆ ಸಮೀಪ ಪರಸ್ಪರ ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಘಟನೆಯಿಂದ ಬಸ್ಸಿನಲ್ಲಿದ್ದ ಶಾಲಾ ವಿದ್ಯಾರ್ಥಿಗಳು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕೇರಳ ಮೂಲದ ಒಂದೇ ಶಾಲೆಗೆ ಸಂಬಂಧಪಟ್ಟ ವಿದ್ಯಾರ್ಥಿಗಳು ಬಸ್ಸಿನಲ್ಲಿ ಮೈಸೂರು ಕಡೆಗೆ ಶೈಕ್ಷಣಿಕ ಪ್ರವಾಸಕ್ಕೆಂದು ಹೋಗುತ್ತಿದ್ದರು.ಮಾಣಿ ಮೈಸೂರು ಹೆದ್ದಾರಿ ಪೆರಾಜೆ ಸಮೀಪ ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಒಂದು ಕಡೆಗೆ ತಿರುಗಿಸಿದಾಗ ಬಸ್ಸು ಚಾಲಕ ಬ್ರೇಕ್ ಹಾಕಿದ್ದು ಇಂದಿನಿಂದ ಬರುತ್ತಿದ್ದ ಬಸ್ಸು ಈ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಘಟನೆಯಿಂದ ಬಸ್ಸುಗಳು ಅಲ್ಪ ಮಟ್ಟಿಗೆ ಜಖಂಗೊಡಿದ್ದು ವಿದ್ಯಾರ್ಥಿಗಳು, ಚಾಲಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎನ್ನಲಾಗಿದೆ.