ಸುದ್ದಿ ವರದಿಯ ಫಲಶ್ರುತಿ

0

ವರದಿಗೆ ಸ್ಪಂದಿಸಿ ನಿಂತಿಕಲ್ಲು ಬಸ್ಸು ತಂಗುದಾಣ ಪರಿಸರ ಸ್ವಚ್ಛಗೊಳಿಸಿದ ಸ್ಥಳೀಯ ರಿಕ್ಷಾ ಚಾಲಕರು

ನಿಂತಿಕಲ್ಲು ಪೇಟೆಯ ಹೃದಯ ಭಾಗದಲ್ಲಿರುವ ಪ್ರಯಾಣಿಕರ ಬಸ್ಸು ತಂಗುದಾಣದ ಪರಿಸರದಲ್ಲಿ ಪ್ಲಾಸ್ಟಿಕ್ ಮತ್ತು ಕಸ ತ್ಯಾಜ್ಯಗಳು ತುಂಬಿಕೊಂಡು ಪರಿಸರದ ಸೌಂದರ್ಯ ಹಾಳಾದ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಸುದ್ದಿ ವೆಬ್ಸೈಟ್ ಚಾನಲ್ನಲ್ಲಿ ವರದಿ ಮಾಡಲಾಗಿತ್ತು.

ಇದೀಗ ವರದಿಗೆ ಸ್ಪಂದಿಸಿರುವ ಸ್ಥಳೀಯ ರಿಕ್ಷಾ ಚಾಲಕರು ತಂಗುದಾಣದ ಪರಿಸರವನ್ನು ಸ್ವಚ್ಛಗೊಳಿಸಿ ಪರಿಸರ ಸುಂದರತೆಯನ್ನು ಕಾಪಾಡಿಕೊಂಡಿದ್ದು ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.