ಬೆಂಗಳೂರಿನಲ್ಲಿ ಡಾ. ದಾಮ್ಲೆಯವರಿಗೆ ಸನ್ಮಾನ

0

ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಿ ಸಮಗ್ರ ಶಿಕ್ಷಣ ನೀಡುತ್ತಿರುವುದಕ್ಕಾಗಿ ಬೆಂಗಳೂರಿನ
ಎರಡು ಇಂಗ್ಲೀಷ್ ಮೀಡಿಯಂ ಶಾಲೆಗಳವರು
ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮಲೆಯವರನ್ನು ಆಮಂತ್ರಣವಿತ್ತು 1-12-2023 ರಂದು ಸನ್ಮಾನಿಸಿದ್ದಾರೆ. ಒಂದು CBSC ಪಠ್ಯದ
Zen International Public School.
ಇನ್ನೊಂದು, ರಾಜ್ಯ ಪಠ್ಯ ಕ್ರಮದ “ನಿಸರ್ಗ ವಿದ್ಯಾರ್ಥಿ ನಿಕೇತನ” ಶಾಲೆ.
ನಿಸರ್ಗ ನಿಕೇತನ ಶಾಲೆಯಲ್ಲಿ ದಾಮಲೆಯವರು ಶಿಕ್ಷಕಿಯರಿಗೆ ತರಬೇತಿ ನಡೆಸಿದರು. Zen ಶಾಲೆಯಲ್ಲಿ ಏರ್ಪಡಿಸಿದ್ದ Grand Parents Day ಯಲ್ಲಿ ಮುಖ್ಯ ಅತಿಥಿಯಾಗಿ ಮಕ್ಕಳನ್ನು ಬೆಳೆಸುವ ಉಪಾಯಗಳ ಬಗ್ಗೆ ಮಾತಾಡಿದರು.

ಮಹಾನಗರದ ಈ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ಭಿನ್ನತೆ ಬಿಟ್ಟರೆ ಸ್ನೇಹ ಶಾಲೆಯಂತೆಯೇ ಈ ಎರಡು ಶಾಲೆಗಳಲ್ಲೂ ಭಾರತಿಯ ಸಂಸ್ಕೃತಿಯ ಶಿಕ್ಷಣವಿದೆ. ಈ ಶಿಕ್ಷಣವೇ ತಮ್ಮಲ್ಲಿಗೆ ಹೆತ್ತವರನ್ನು ಆಕರ್ಶಿಸುತ್ತಿದೆ ಎನ್ನುತ್ತಾರೆ ಈ ಶಾಲೆಗಳ ಆಡಳಿತ ಮಂಡಳಿಯವರು. ಭಾರತದಲ್ಲಿ ಜಾತ್ಯಾತೀತವಾಗಿ ಮೂಲಭೂತ ಮಾನವೀಯತೆಯ ಸಂಸ್ಕೃತಿ ಶಿಕ್ಷಣದ ಮಹತ್ವವನ್ನು ಜನರು ಕಾಣುತ್ತಿದ್ದಾರೆ ಎನ್ನುವುದಕ್ಕೆ ಈ ಶಾಲೆಗಳೇ ಸಾಕ್ಷಿ ಎಂದಿದ್ದಾರೆ ದಾಮಲೆಯವರು. Zen ಶಾಲೆಯ ಪ್ರಾಂಶುಪಾಲೆ ಉಬರಡ್ಕದ ಪ್ರಶಾಂತಿ ರಾವ್ ಕೊನೆಯಲ್ಲಿ ವಂಡಿಸಿದರು.