ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಶಿಕ್ಷಕರ ಸಮಲೋ‌‍ಚನ ಸಭೆ

0

ಸುಬ್ರಹ್ಮಣ್ಯ, ಪಂಜ ಮತ್ತು ಎಣ್ಮೂರು ಕ್ಲಸ್ಟರ್ ಮಟ್ಟದ ಸಮಾಲೋಚನಾ‌ ಸಭೆ ಮುರುಳ್ಯ ಶಾಂತಿನಗರ ಸ.ಹಿ.ಪ್ರಾ. ಶಾಲೆಯಲ್ಲಿ ಡಿ. 2ರಂದು ನಡೆಯಿತು.

ಎಸ್.ಡಿ.ಎಂ.ಸಿ.‌ ಅಧ್ಯಕ್ಷ ದಿನೇಶ್ ನಡುಬೈಲು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕಿ ಸೀತಾ ಶುಭ ಹಾರೈಸಿದರು.
ಪಂಜ ಮತ್ತು ಎಣ್ಮೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಂತ ಕಲ್ತಾಜೆ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆಯಲ್ಲಿ ವಿವಿಧ ಶಾಲೆಯ 59 ಶಿಕ್ಷಕರು ಭಾಗವಹಿಸಿದ್ದರು.