ಕುಕ್ಕೆ ಸುಬ್ರಹ್ಮಣ್ಯದ ಅಂಗಾರ ಮಲೆ ಕುಡಿಯ ನಿಧನ

0

ಅರ್ಧ ಶತಮಾನದಿಂದಲೂ ರಥ ಕಟ್ಟುತ್ತಿದ್ದ ಕಲಾಕಾರ

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಕಾಲನಿ ನಿವಾಸಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಲವು ವರ್ಷಗಳಿಂದಲೂ ರಥ ಕಟ್ಟುವ ಕೆಲಸ ಮಾಡುತಿದ್ದ ಅಂಗಾರ ಅವರು ನ.17 ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಲ್ಲಿ ಸುಮಾರು 55 ವರ್ಷಗಳ ಕಾಲ ರಥ ಕಟ್ಟುವ ಕೆಲಸ ಮಾಡುತಿದ್ದರು.

ಮೃತರು ಪತ್ನಿ ವೆಂಕಮ್ಮ, ಪುತ್ರಿಯರಾದ ಶ್ರೀಮತಿ
ಕಮಲ ಕಾಸರಗೋಡು ಕೊಜಪ್ಪೆ, ಶ್ರೀಮತಿ
ಪದ್ಮಾವತಿ ಶಿಶಿಲ, ಶ್ರೀಮತಿ
ತನುಜ ಅರಮನೆಗಯ ಪುತ್ರರಾದ
ರೋಹಿತ್ , ಸುಂದರ, ದಿನಕರ
ಅಶೋಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು‌‌ ಮತ್ತು ಬಂಧುಗಳನ್ನು ಅಗಲಿದ್ದಾರೆ.