ರಾಜ್ಯ ಮಟ್ಟದ ಭಾರತೀಯಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರಒಕ್ಕೂಟದ ಅಧ್ಯಕ್ಷರಾಗಿ ವಿದ್ವಾನ್ ಸಾಯಿನಾರಾಯಣ ಕಲ್ಮಡ್ಕ ಆಯ್ಕೆ

0

ರಾಜ್ಯ ಮಟ್ಟದ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ವಿದ್ವಾನ್ ಸಾಯಿನಾರಾಯಣ ಕಲ್ಮಡ್ಕ ಆಯ್ಕೆಯಾಗಿದ್ದಾರೆ. ಶಾಸ್ತ್ರೀಯ ಕಲೆಗಳನ್ನು
ಉಳಿಸುವುದು ಮತ್ತು ಬೆಳೆಸುವುದು, ಸಂಗೀತ ಹಾಗೂ ನೃತ್ಯ ಕಲಾವಿದರನ್ನು ಒಗ್ಗೂಡಿಸುವ ಉದ್ದೇಶವನ್ನು ಒಕ್ಕೂಟ ಹೊಂದಿದ್ದು, ಯುವ
ಕಲಾವಿದರಿಗೆ ವೇದಿಕೆ ಒದಗಿಸುವುದು, ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಿ ಶಾಸ್ತ್ರೀಯ
ಗುಣಮಟ್ಟ ಹೆಚ್ಚಿಸುವ ಪ್ರಯತ್ನವನ್ನು ಒಕ್ಕೂಟದ
ಮೂಲಕ ಮಾಡುವುದಾಗಿ ಅಧ್ಯಕ್ಷ ನಾರಾಯಣ ಕಲ್ಮಡ್ಕ ಪತ್ರಿಕಗೆ ತಿಳಿಸಿದ್ದಾರೆ. ಕಲ್ಮಡ್ಕ ಪರಿಸರದಲ್ಲಿ ಕಲಾಗ್ರಾಮ ಎಂಬ ಹೆಸರಿನಿಂದ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಹಿಸುತ್ತಾ ನಾಟಕ, ಯಕ್ಷಗಾನ ತರಬೇತಿಗಳನ್ನು ನೀಡಿ, ಅವರಿಂದ ಪ್ರದರ್ಶನ ಮಾಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಯಿನಾರಾಯಣರು ಊರಿನ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.