ಅರಂತೋಡು: ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಹತ್ತು ಮುಸ್ಲಿಂ ಕತೆಗಳ “ಬೆಳಕಿನಡೆಗೆ” ಪುಸ್ತಕ ರಾ ಚಿನ್ತನ್ ಹಾಗೂ ಡಾ| ಇಫ್ತಿಕಾರ್ ಗೆ ಹಸ್ತಾಂತರ

0

ಅರಂತೋಡಿನ ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನದ ವತಿಯಿಂದ ತೆಕ್ಕಿಲ್ ಮೊಹಮ್ಮದ್ ಹಾಜಿಯವರ 50ನೇ ಪುಣ್ಯ ಸ್ಮರಣೆಗಾಗಿ ಹೊರತಂದ ಸುಳ್ಯ ನೆಹರು ಸ್ಮಾರಕ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಿರಿಯ ಲೇಖಕ ಡಾ| ಪ್ರಭಾಕರ ಶಿಶಿಲರವರ ಕೃತಿ ಹತ್ತು ಮುಸ್ಲಿಂ ಕತೆಗಳು “ಬೆಳಕಿನಡೆಗೆ “ ಎಂಬ ಪುಸ್ತಕವನ್ನು ಬೆಂಗಳೂರಿನಲ್ಲಿ ನ.30 ರಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರವರ ನಿವಾಸದಲ್ಲಿ ರಾ. ಚಿನ್ತನ್ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ| ಯು.ಟಿ. ಇಫ್ತಿಕಾರ್ ರವರಿಗೆ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ತೆಕ್ಕಿಲ್ ಕುಟುಂಬದ ಹಿರಿಯ ಸದಸ್ಯೆ ರಾಷ್ಟ್ರಪತಿ ಪದಕ ವಿಜೇತ ಉಪಪೊಲೀಸ್ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿ ದಿ. ಸಿ.ಮೊಹಮ್ಮದ್ ಇಕ್ಬಾಲ್ ಅವರ ಪತ್ನಿ ಜೈಬುನ್ನಿಸ ಇಕ್ಬಾಲ್, ಕರ್ನಾಟಕ ಉಚ್ಚ ನ್ಯಾಯಾಲಯದ ಸರಕಾರಿ ವಕೀಲ ವಹಿದಾ ಹಾರಿಸ್ ತೆಕ್ಕಿಲ್, ಹಿಂದುಸ್ತಾನ್ ಆರೋನಾಟಿಕಲ್ ಇಂಜಿನಿಯರ್ ಹಂಸ ತೆಕ್ಕಿಲ್, ಉದ್ಯಮಿ ಮೋಹಿದೀನ್ ಕುಂಞಿ ತೆಕ್ಕಿಲ್, ಫಾರ್ಮೇಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಆರಿಸ್ ತೆಕ್ಕಿಲ್, ವಿಪ್ರೋ ಸಾಫ್ಟ್ ವೇರ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಅಮೀರ್ ತೆಕ್ಕಿಲ್ ಪೇರಡ್ಕ, ಅಫ್ತಾಬ್ ಮನಂಬ ತೆಕ್ಕಿಲ್, ಶ್ರೀಮತಿ ಶಮೀಮ ಅಬ್ದುಲ್ ರಹಿಮಾನ್ ಸಂಕೇಶ್, ಬೆಂಗಳೂರಿನ ಉದ್ಯಮಿಗಳಾದ ಸಲೀಂ ಟರ್ಲಿ ತೆಕ್ಕಿಲ್, ಆರಿಫ್ ತೆಕ್ಕಿಲ್, ಸಿದ್ದೀಕ್ ಕೊಕ್ಕೊ, ತೆಕ್ಕಿಲ್ ಕುಟುಂಬ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಟರ್ಲಿ ತೆಕ್ಕಿಲ್ ಮೊದಲಾದವರು ಉಪಸ್ಥಿತರಿದ್ದರು.