ಅಡ್ಕಾರು ಅಯ್ಯಪ್ಪ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಗೊನೆ ಮುಹೂರ್ತ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಅಯ್ಯಪ್ಪ ಮಂದಿರದಲ್ಲಿ ಡಿ.15ರಂದು ಜರುಗಲಿರುವ 17ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಡಿ‌.9ರಂದು ಮುಹೂರ್ತದ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ನಾರಾಯಣ ಮಡಿವಾಳ , ಅಧ್ಯಕ್ಷ ಅಶೋಕ ಅಡ್ಕಾರು, ಪ್ರದಾನ ಕಾರ್ಯದರ್ಶಿ ಮನು ಎ‌ನ್. ಪದವು, ಕೋಶಾಧಿಕಾರಿ ದಾಮೋದರ ಎ.ಎಸ್. ಅಡ್ಕಾರುಪದವು, ಉಪಾಧ್ಯಕ್ಷ ಪುರುಷೋತ್ತಮ ಕಾಮತ್ ಅಡ್ಕಾರು, ಗುರುಸ್ವಾಮಿ ಚಂದ್ರಶೇಖರ ಅಡ್ಕಾರು ಸೇರಿದಂತೆ ಅಯ್ಯಪ್ಪ ವೃತಧಾರಿಗಳು ಉಪಸ್ಥಿತರಿದ್ದರು.