ಐವರ್ನಾಡು ಶಾಲೆಯಲ್ಲಿ ನಗದು ಕಳ್ಳತನ

0

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಡಿ.07 ರಂದು ರಾತ್ರಿ ನಗದು ಕಳವುಗೈದಿದ್ದು ಇಂದು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಮಿಸಿರುವುದಾಗಿ ತಿಳಿದು ಬಂದಿದೆ.

ಕಳ್ಳರು ಕಿಟಕಿ ಗಾಜು ಪುಡಿಗೈದಿದ್ದು ಬಳಿಕ ಎದುರಿನ ಬಾಗಿಲಿನ ಬೀಗದ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನ ಬೀಗ ತೆಗೆದು ಸುಮಾರು 30,794 ರೂ ನಗದು ಕಳವುಗೈದಿದ್ದರು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿದುಬಂದಿದೆ.