ಗುಡ್ಡಡ್ಕದಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ ಕನಕಮಜಲು ಗ್ರಾ.ಪಂ.ವತಿಯಿಂದ ದಂಡ

0

ಕನಕಮಜಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡಡ್ಕ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ತ್ಯಾಜ್ಯ ವಸ್ತುಗಳನ್ನು ಸುರಿದವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯತಿ ವತಿಯಿಂದ ದಂಡ ವಿಧಿಸಿದ ಘಟನೆ ಡಿ.8ರಂದು ಸಂಭವಿಸಿದೆ.

ಗುಡ್ಡಡ್ಕದಲ್ಲಿ ಪೆರ್ಲಂಪಾಡಿ ಮೂಲದ ವ್ಯಕ್ತಿಗಳು ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿದ್ದು, ಬಳಿಕ ತ್ಯಾಜ್ಯದಲ್ಲಿ ಡೈರಿಯೊಂದರಲ್ಲಿದ್ದ ದೂರವಾಣಿ ನಂಬರನ್ನು ಸ್ಥಳೀಯರು ಪತ್ತೆಹಚ್ಚಿ ಗ್ರಾಮ ಪಂಚಾಯತಿಗೆ ನೀಡಿದ್ದು, ಗ್ರಾ.ಪಂ. ವತಿಯಿಂದ ದೂರವಾಣಿ ಕರೆ ಮಾಡಿದಾಗ ತಾವು ತ್ಯಾಜ್ಯ ಎಸೆದಿರುವುದನ್ನು ಒಪ್ಪಿಕೊಂಡ ಅವರು ಬಂದು ತಾವು ಎಸೆದ ತ್ಯಾಜ್ಯವನ್ನು ಅಲ್ಲಿಂದ ತೆರವುಗೊಳಿಸಿ, ಗ್ರಾ.ಪಂ.ಗೆ ಬಂದು ಮೂರು ಸಾವಿರ ರೂ. ದಂಡ ಕಟ್ಟಿರುವುದಾಗಿ ತಿಳಿದುಬಂದಿದೆ.