ಡಾಕ್ಟರ್ ಆಫ್ ಫಾರ್ಮಸಿಯಲ್ಲಿ ಡಾ. ಹರ್ಷಿತ ಯಂ.ಜೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಪ್ರತಿಷ್ಠಿತ ರಾಜೀವ್ ಗಾಂಧಿ ಯುನಿವರ್ಸಿಟಿಯ ಅಧೀನದಲ್ಲಿರುವ ಧಾರವಾಡದ ಸೋನಿಯ ಕಾಲೇಜಿನಲ್ಲಿ ಡಾಕ್ಟರ್ ಆಫ್ ಫಾರ್ಮೆಸಿ ಕೋರ್ಸ್ ಲ್ಲಿ ನಾಲ್ಕೂರು ಗ್ರಾಮದ ಮರಕತ ಹರ್ಷಿತ ಯಂ.ಜೆ ಯವರು 83% ಡಿಸ್ಟಿಂಕ್ಷನ್‌ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು
ಸುಬ್ರಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಮುಗಿಸಿ ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ಪೂರೈಸಿದ್ದಾರೆ. ಇವರು ಮರಕತ ನಿವಾಸಿ , ನಿವೃತ್ತ ಯೋಧ
ಜನಾರ್ಧನ ಮತ್ತು ಶೀಲಾವತಿ ದಂಪತಿಗಳ ಪುತ್ರಿ.