ಆಲೆಟ್ಟಿ: ಕಲ್ಚೆರ್ಪೆ ಸಿರಿಕುರಲ್ ನಗರದ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

0

ನಿರಂತರ ಭಜನಾ ಸಂಕೀರ್ತನೆ ಹಾಗೂ ಸಾನಿಧ್ಯದಲ್ಲಿ ನೆಲೆಸಿರುವ ಕಾರಣಿಕ ಗುಳಿಗ ದೈವದ ಕೋಲ

ಆಲೆಟ್ಟಿ ಗ್ರಾಮದ ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕೇಶ್ವರಿ
ಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು
ಉತ್ಸವ ಸಮಿತಿಯ ಆಶ್ರಯಲ್ಲಿ ಶ್ರೀ
ವನದುರ್ಗಾ ರಕೇಶ್ವರಿ ಪರಿವಾರ ದೈವಗಳ
ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾನಿಧ್ಯದಲ್ಲಿ ನೆಲೆಸಿರುವ ಕಾರಣಿಕ ಶ್ರೀ ಗುಳಿಗ ದೈವದ ಕೋಲವು ಡಿ.12 ರಂದು ಜರುಗಿತು.


ಪ್ರಾತ:ಕಾಲದಲ್ಲಿ ಬಂಬ್ರಾಣದ ತಂತ್ರಿವರ್ಯರು
ಬಿ.ಶಂಕರನಾರಾಯಣ ಕಡಮಣ್ಣಾಯ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮದ ಪ್ರಯುಕ್ತ
ಸ್ಥಳ ಶುದ್ದಿ, ಗಣಹೋಮ, ವನದುರ್ಗಾಹೋಮ, ಆಶ್ಲೇಷ ಬಲಿ, ತಂಬಿಲ ಸೇವೆಯು ನಡೆಯಿತು.
ಮಧ್ಯಾಹ್ನಮಹಾಪೂಜೆಯಾಗಿಪ್ರಸಾದವಿತರಣೆಯಾಯಿತು. ಬಳಿಕ ಸಾರ್ವಜನಿಕಅನ್ನಸಂತರ್ಪಣೆಯು ನೆರವೇರಿತು.


ಬೆಳಗ್ಗಿನಿಂದ ಸಂಜೆಯ ತನಕ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದಭಜನಾಸಂಕೀರ್ತನಾಕಾರ್ಯಕ್ರಮನಡೆಯಿತು.ಬಳಿಕಮಹಾಮಂಗಳಾರತಿಯೊಂದಿಗೆಭಜನೆಯುಸಮಾಪನಗೊಂಡಿತು.
ಸಂಜೆ ಸಮಯದಲ್ಲಿ ಸಾನಿಧ್ಯದಲ್ಲಿ ನೆಲೆ ನಿಂತಿರುವ ಕಾರಣಿಕ ದೈವವಾಗಿರುವ ಶ್ರೀ ಗುಳಿಗ ದೈವದಕೋಲವು ವಿಜ್ರಂಭಣೆಯಿಂದ ನಡೆಯಿತು. ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆಯ ನಂತರ ರಾತ್ರಿ ಸಮಯದಲ್ಲಿ ಭೋಜನ ಪ್ರಸಾದವಿತರಣೆಯಾಯಿತು.


ಸಭಾ ಕಾರ್ಯಕ್ರಮ:
ವಾರ್ಷಿಕೋತ್ಸವದ ಅಂಗವಾಗಿ ಸಂಜೆ ನಡೆದ
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನುಉತ್ಸವ ಸಮಿತಿ ಗೌರವಾಧ್ಯಕ್ಷ
ವಾಸುದೇವ ಗೌಡ ಕುಡೆಕಲ್ಲು ವಹಿಸಿದ್ದರು.
ಶ್ರೀ ವನದುರ್ಗಾ ರಕ್ತೇಶ್ವರಿ
ಪರಿವಾರ ದೈವಗಳ ಸೇವಾ ಟ್ರಸ್ಟ್‌ನಅಧ್ಯಕ್ಷಕೆ.ಗೋಕುಲ್‌ದಾಸ್ ಪ್ರಾಸ್ತಾವಿಕ
ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾಕುಮಾರಿ,
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷಎನ್.ಜಯಪ್ರಕಾಶ್ ರೈ, ನಗರಪಂಚಾಯತ್ ಸದಸ್ಯ ಎಂ.ವೆಂಕಪ್ಪಗೌಡ, ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಅಧ್ಯಕ್ಷನಾರಾಯಣ ಕೇಕಡ್ಕ, ಉತ್ಸವ ಸಮಿತಿ ಅಧ್ಯಕ್ಷಕರುಣಾಕರ ಪಾಲಡ್ಕ, ಪ್ರಗತಿಪರ ಕೃಷಿಕ ಲೋಕೇಶ್ ಸುಳ್ಳಿ,
ಆಲೆಟ್ಟಿ ಪಂಚಾಯತ್ ಸದಸ್ಯರಾದ ಸುಧೇಶ್
ಅರಂಬೂರು, ವೇದಾವತಿ ನೆಡ್ಚಿಲು,ಅನಿತಾ
ಇಡ್ಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಧನಿಕಾ ಕೆ.ಎನ್ ಪ್ರಾರ್ಥಿಸಿದರು. ಸಂಚಾಲಕ ಅಶೋಕ್ ಪೀಚೆ ಸ್ವಾಗತಿಸಿದರು. ಕೋಶಾಧಿಕಾರಿ ಸುಧೇಶ್ ಅರಂಬೂರುವಂದಿಸಿದರು.ಶಶಿಧರಕೊಯಿಕುಳಿಕಾರ್ಯಕ್ರಮನಿರೂಪಿಸಿದರು.

ಉತ್ಸವ ಸಮಿತಿ
ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೊಕ್ಕಾಡಿ
ಸಿರಿಕುರಲ್ ನಗರ,
ಶ್ರೀ ವನದುರ್ಗಾ ರಕ್ತೇಶ್ವರಿ ಪರಿವಾರ ದೈವಗಳ
ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ
ವೆಂಕಟೇಶ ಕಲ್ಚೆರ್ಪೆ, ಖಜಾಂಜಿ ಬೆಳ್ಯಪ್ಪ ಗೌಡ,ಉಪಾಧ್ಯಕ್ಷರಾದ ಅರವಿಂದ ಕೆ.ಕೆ, ಪುರುಷೋತ್ತಮ ಕೆ.ಆರ್, ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯರಾದ ರಾಮ ನಾಯ್ಕ ಕೆ.ಎಂ, ಬಾಲಚಂದ್ರ ಕೆ.ಎ, ಮುರಳೀಧರ ಎ, ನಾಗೇಂದ್ರ ಆಚಾರ್ಯ, ಕೆ.ಆರ್.ಪದ್ಮನಾಭ, ಎ.ಸಿ.ವಸಂತ, ಶೀನಪ್ಪ ಗೌಡ ಪಾಲಡ್ಕ, ಪ್ರಭಾಕರ ರೈ ಪೆರಾಜೆ, ಭವ್ಯ ಕಲ್ಚೆರ್ಪೆ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಸದಸ್ಯರು, ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ‌ಭಕ್ತರು ನೆರೆದಿದ್ದರು.