ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಪಠ್ಯಪೂರಕ ಕಲಿಕೆಗೆ ರಾಷ್ಟ್ರೀಯ ಪ್ರಶಸ್ತಿ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಮೆಯವರು Education Today ಸಂಸ್ಥೆಯು ಕೊಡಮಾಡಿದ ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನ ಏರ್ ಪೂರ್ಟ್ ನಲ್ಲಿರುವ ತಾಜ್ ಹೋಟೇಲ್ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸ್ವೀಕರಿಸಿದರು. ಸ್ನೇಹ ಶಾಲೆಯಲ್ಲಿ ಪಠ್ಯಪೂರಕವಾಗಿ ಒದಗಿಸಿರುವ ಶೈಕ್ಷಣಿಕ ಚಟುವಟಿಕೆಗಳಿಗಾಗಿ State Board ಶ್ರೇಣಿಯಲ್ಲಿ Ranked No.1. ಎಂದು ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ದೇಶದ ವಿವಿಧ ಕಡೆಗಳಿಂದ ಆಯ್ಕೆಯಾಗಿ ಬಂದಿದ್ದ C.B.S.C, I.C.S.E, I State Boardis ಪ್ರತಿಷ್ಠಿತ ಶಾಲೆಗಳು ಈ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಕ್ಕಳ ಕೌಶಲ್ಯಾಭಿವೃದ್ಧಿಗಾಗಿ ಆಟಗಳ ಬಳಕೆ, ಮನಶ್ಯಾಸ್ತ್ರೀಯ ಸಲಹೆಗಳ ಪ್ರಾಮುಖ್ಯ, ಜೀವನ ಮೌಲ್ಯಗಳ ಅಂತರ್ಗತೀಕರಣ; ಪೋಷಕರ ಹೊಣೆಗಾರಿಕೆ, ಅಂತಾರಾಷ್ಟ್ರೀಯ, ಶಿಕ್ಷಣಾವಕಾಶಗಳ ಬಗ್ಗೆ ವಿಚಾರ ಸಂಕಿರಣಗಳು ನಡೆದವು.