ಸುಳ್ಯಕ್ಕೊಂದು ಗುಡ್ ನ್ಯೂಸ್

0

ಸುಳ್ಯದ ಜನತೆಗೆ ಸಂತಸದ ಸುದ್ದಿಯೊಂದು ಕಾದಿದೆ. ಸಿಎನ್ ಜಿ ವಾಹನಗಳಿಗೆ ಗ್ಯಾಸ್ ಫಿಲ್ ಮಾಡಲು ಇನ್ನು ಬೇರೆ ಊರಿಗೆ ಅಲೆದಾಡಬೇಕಿಲ್ಲ. ಸುಳ್ಯದ ಓಡಬಾಯಿಯಲ್ಲಿರುವ ಲಕ್ಷ್ಮಿ ನಾರಾಯಣ ಎಂಟರ್ ಪ್ರೈಸಸ್ ನಲ್ಲಿ ಇನ್ನು ಮುಂದೆ ಸಿಎನ್ ಜಿ‌ ಗ್ಯಾಸ್ ಸಿಗಲಿದೆ.

ಗ್ರಾಹಕರ ಅನುಕೂಲಕ್ಕಾಗಿ ಲಕ್ಷ್ಮೀನಾರಾಯಣ ಎಂಟರ್ ಪ್ರೈಸಸ್ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಸಿಎನ್ ಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಆರಂಭಿಸಿದೆ. ಡಿ.15ರಂದು ಈ ಸೇವೆ ಆರಂಭವಾಗಿದ್ದು, ಜನತೆ ತಮ್ಮ ವಾಹನಗಳಿಗೆ ಗ್ಯಾಸ್ ಫಿಲ್ ಮಾಡಬಹುದು. ಉತ್ತಮ ರೀತಿಯ ಸೇವೆಗಾಗಿ‌ ಹೆಸರುವಾಸಿಯಾಗಿರುವ ಸಂಸ್ಥೆಯಲ್ಲಿ ಸಿಎನ್ ಜಿ ಗ್ಯಾಸ್ ಲಭಿಸುತ್ತಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಸಂಸ್ಥೆಯ ಮಾಲಕ ಧನಂಜಯ ಅಡ್ಪಂಗಾಯ ವಿನಂತಿಸಿದ್ದಾರೆ.

ಇಂದು ಉದ್ಘಾಟನೆ ದಿನ ಪ್ರಥಮ ಗ್ರಾಹಕರಾಗಿ ಉದ್ಯಮಿ ಸೂರಯ್ಯ ಸೂಂತೋಡು ಇವರ ಪತ್ನಿ ನಳಿನಿ ಸೂರಯ್ಯ ತಮ್ಮ ವಾಹನಕ್ಕೆ ಸಿಎನ್ ಜಿ ಫಿಲ್ ಮಾಡಿಕೊಂಡರು.