ಸುಳ್ಯ ರೋಟರಿ ‌ವಿದ್ಯಾಸಂಸ್ಥೆಯಲ್ಲಿ ಕೆ.ವಿ.ಜಿ ಸಾಧನೆ ಮತ್ತು ಸಂಸ್ಕರಣೆ ಕಾರ್ಯಕ್ರಮ

0

ಡಿಸೆಂಬರ್ ೧೬ ರಂದು ರೋಟರಿ ಪ್ರೌಢಶಾಲೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ ಇದರ ವತಿಯಿಂದ ಕೆ.ವಿ.ಜಿ ಸಾಧನೆ ಸಂಸ್ಮರಣೆ ಕಾರ್ಯಕ್ರಮ ಮತ್ತು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.


ಸಮಾರಂಭದ ಸಭಾಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾಗಿರುವ ಹಾಗೂ ಕಾರ್ಯಕ್ರಮದ ನಿರ್ದೇಶಕರಾಗಿರುವ ರೋ.ಆನಂದ ಖಂಡಿಗ ವಹಿಸಿದ್ದರು.ಶಾಲಾ ಸಂಚಾಲಕರಾದ ರೋ.ಗಿರಿಜಾ ಶಂಕರ್ ತುದಿಯಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಉದ್ಘಾಟನಾ ಮಾತುಗಳನ್ನಾಡಿದರು.ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿ ಹಾಗು ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ರೋ.ಸಂಜೀವ ಕುದ್ಪಾಜೆಯವರು ಕೆ.ವಿ.ಜಿ ಸಾಧನೆಯನ್ನು ಮನೋಜ್ಞವಾಗಿ ವರ್ಣಿಸಿದರು. ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಅಪೂರ್ವ,ಸಮನ್ವಿತಾ ಪ್ರಾರ್ಥೀಸಿದರು.

ಮುಖ್ಯಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿದರು.ಕಾರ್ಯಕ್ರಮದ ನಿರ್ದೇ ಶಕರಾದ ಚಂದ್ರಾಕ್ಷಿ ಜೆ .ರೈ ವಂದಿಸಿದರು.ರಮ್ಯಾ.ಅಡ್ಕಾರು ನಿರೂಪಿಸಿದರು.