ಬಂದಡ್ಕಕ್ಕೆ ಸುಳ್ಯ ಶಾಸಕಿ‌ ಭಾಗೀರಥಿ ಮುರುಳ್ಯ ಭೇಟಿ

0

ಸುಬ್ರಹ್ಮಣ್ಯ ದೇವಸ್ಥಾನ, ಗಡಿನಾಡ ಕನ್ನಡಿಗರ ಸಂಘ ಮತ್ತು ಬಿಜೆಪಿ ಕಚೇರಿಗೆ ಭೇಟಿ – ಸನ್ಮಾನ

ಸುಳ್ಯ ಮತ್ತು ಕಾಸರಗೋಡಿನ‌ ಗಡಿ ಪ್ರದೇಶವಾದ ಬಂದಡ್ಕಕ್ಕೆ‌ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಡಿ.16ರಂದು ಭೇಟಿ ನೀಡಿದರು.

ಬಂದಡ್ಕದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಶ್ರೀ ದೇವರ ದರ್ಶನ ಪಡೆದರು. ಶಾಸಕರಾಗಿ ಮೊದಲ‌ ಬಾರಿ ಭೇಟಿ ನೀಡಿದ ಭಾಗೀರಥಿಯವರನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಗಡಿನಾಡ ಕನ್ನಡಿಗರ ಸಂಘಕ್ಕೆ ಭೇಟಿ ನೀಡಿದರು.‌ ಹಾಗೂ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಗಡಿನಾಡ ಕನ್ನಡಿಗರ ಸಂಘ ಬಂದಡ್ಕ ಇದರ ಅಧ್ಯಕ್ಷರಾದ ಪುರುಷೋತ್ತಮ ಬೊಡ್ಡನಕೊಚ್ಚಿ, ಕಾರ್ಯದರ್ಶಿ ನಿತ್ಯಾನಂದ ಎಂ.ಕೆ., ಉಪಾಧ್ಯಕ್ಷರಾದ ವಿಶ್ವ ಕುಮಾರ್ ಕಟ್ಟಕ್ಕೋಡಿ ಹಾಗೂ ದಿನೇಶ್ ಮಾಸ್ತರ್, ಚರಣ್ ಕುಮಾರ್ ಬಿ., ಕೊರಗ ನಾಯ್ಕ್, ವಿವೇಕಾನಂದ‌ ಪಾಲಾರು, ಧರ್ಮಾವತಿ ಕೆ., ಸುಬ್ರಹ್ಮಣ್ಯ ದೇವಸ್ಥಾನದ ಉಪಾಧ್ಯಕ್ಷರಾದ ಬೋಜಪ್ಪ ಗೌಡ, ಕೋಶಾಧಿಕಾರಿ ಐ. ಮೋನಪ್ಪ ಗೌಡ ಹಾಗೂ ವೆಂಕಪ್ಪ ರೈ, ಸುಂದರ ಗೌಡ, ಪ್ರೀತಮ್‌ ಕುಮಾರ್ ರೈ ಉಪಸ್ಥಿತರಿದ್ದರು.