ಫ್ಯಾಷನ್ ಶೋ ನಲ್ಲಿ ಸಮೃದ್ಧಿಗೆ ಚಿನ್ನದ ಕಿರೀಟ

0

ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ತು (ರಿ.) ಮೈಸೂರಿನಲ್ಲಿ ನಡೆಸಿದ ಫ್ಯಾಷನ್ ಶೋ 2023 ಸ್ಪರ್ಧೆಯಲ್ಲಿ ಸುಳ್ಯದ ಸಮೃದ್ದಿ ಎಸ್ ಚಿನ್ನದ ಕಿರೀಟಕ್ಕೆ ಭಾಜನಳಾಗಿದ್ದಾಳೆ.

ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಯಲ್ಲಿ ಈಕೆ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.

ಸಮೃದ್ಧಿ ಗೂನಡ್ಕ ಬೀಜದಕಟ್ಟೆ ‌ನಿವಾಸಿ ‌ಸದಾನಂದ ಮತ್ತು ಸುಳ್ಯ ‌ನಗರ ಪಂಚಾಯತ್ ಉದ್ಯೋಗಿ ಶ್ರೀಮತಿ ಆಶಾ ಬಿ.ಆರ್. ದಂಪತಿಗಳ ಪುತ್ರಿ. ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಒಂದನೇ ತರಗತಿಯ ವಿದ್ಯಾರ್ಥಿನಿ.