ಸೋಣಂಗೇರಿ ಅಂಗನವಾಡಿ ಕಟ್ಟಡ ಅವ್ಯವಸ್ಥೆ ; ಶಾಸಕರ ಮೂಲಕ ಇಲಾಖೆಗೆ ಮನವಿ ಹಿನ್ನಲೆ

0

ವಾಸ್ತವ ತಿಳಿಯಲು ಅಧಿಕಾರಿಗಳ ಭೇಟಿ, ಸಭೆ ನಡೆಸಿ ಚರ್ಚೆ

ಸೋಣಂಗೇರಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ಅಂಗನವಾಡಿ ಕೇಂದ್ರಕ್ಕೆ ಉಂಟಾಗಿರುವ ಸಮಸ್ಯೆ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಸಂಬಂಧಿತ ಇಲಾಖೆಯಗೆ ಶಾಸಕರ ಮೂಲಕ ಮನವಿ ಸಲ್ಲಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಡಿ.22ರಂದು ಅಧಿಕಾರಿಗಳು ಅಂಗನವಾಡಿ ಕೇಂದ್ರದ ವಾಸ್ತವಾಂಶ ತಿಳಿಯಲು ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು ಹಾಗೂ ಮಕ್ಕಳ ಪೋಷಕರು ಮತ್ತು ಊರವರ ಸಭೆಯನ್ನು ಕರೆದು ಚರ್ಚಿಸಿದರು.

ಇಲಾಖೆಯ ತಾಲೂಕು ಯೋಜನಾಧಿಕಾರಿ ಶ್ರೀಮತಿ ಶೈಲಜಾ ಹಾಗೂ ಮೇಲ್ವಿಚಾರಕಿ ಶ್ರೀಮತಿ ಉಷಾರವರು ಸಮಸ್ಯೆಗಳ ಬಗ್ಗೆ ಆಲಿಸಿದರು.

ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಸತ್ಯ ಶಾಂತಿ ತ್ಯಾಗ ಮೂರ್ತಿ ಹಾಜರಿದ್ದು ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಆಗಲಿರುವ ಸಮಸ್ಯೆಗಳ ವಿವರಣೆ ನೀಡಿದರಲ್ಲದೆ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರಿಗೂ ಕರೆ ಮಾಡಿ ವಿವರಿಸಿದರು.

ಅಂಗನವಾಡಿ ಕೇಂದ್ರವನ್ನು ಮತ್ತೊಮ್ಮೆ ಜಿಲ್ಲಾ ಪಂಚಾಯತ್ ತಾಂತ್ರಿಕ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ , ಪಂಚಾಯತ್ ಅಧ್ಯಕ್ಷರು, ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಬಾಲವಿಕಾಸ ಸಮಿತಿಯ ಸದಸ್ಯರುಗಳು ಹಾಗೂ ಮಕ್ಕಳ ಪೋಷಕರೊಂದಿಗೆ ಪುನಃ ಸಮಾಲೋಚಿಸಿ ಆಗುತ್ತಿರುವ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವರಿಸುವ ಭರವಸೆಯನ್ನು ನೀಡಿದರು.

ಸಭೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಪ್ರೇಮಾ ಸುರೇಶ್ ರೈ, ಉಪಾಧ್ಯಕ್ಷ ಚಿದಾನಂದ ಕುಕ್ಕನ್ನೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಅಂಬಿಕಾ ಕುಕ್ಕಂದೂರು, ಶ್ರೀಮತಿ ದೀಪ ಅಜಕಳಮೂಳೆ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ವೇದಾವತಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಮಿನಿಜೋಸ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರವಿಕಲಾ ಚೆನ್ನಪ್ಪ ಗೌಡ ಕಲ್ಲಾಜೆ, ಸಹಾಯಕಿ ಶ್ರೀಮತಿ ಅಸೀನ್ ಆರ್ತಾಜೆ, ಸಾಮಾಜಿಕ ಹೋರಾಟಗಾರ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕನ್ನೂರು ಮತ್ತು ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಬಾಲವಿಕಾಸ ಸಮಿತಿಯ ಸದಸ್ಯರುಗಳು, ಊರವರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರವಿಕಲಾ ಚೆನ್ನಪ್ಪ ಗೌಡ ಕಲ್ಲಾಜೆ ಸ್ವಾಗತಿಸಿ, ವಂದಿಸಿದರು.