ಸೈಂಟ್ ಬ್ರಿಜಿಡ್ಸ್ ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಆಚರಣೆ

0


ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ ಶಾಲೆ ಇದರ ವತಿಯಿಂದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ಡಿ.23 ರಂದು ಸೈಂಟ್ ಬ್ರಿಜಿಡ್ಸ್ ಶಾಲೆ ಆವರಣದಲ್ಲಿ ನಡೆಯಿತು.
ಕ್ರಿಸ್ಮಸ್ ಕಾರ್ಯಕ್ರಮವನ್ನು ಶಾಲೆ ಆವರಣದಲ್ಲಿ ನಿರ್ಮಿಸಿದ ಗೊದಳಿಯಲ್ಲಿ ಬಾಲ ಯೇಸುವನ್ನು ಮಲಗಿಸಿ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರುಗಳಾದ ರೆ.ಪಾ ವಿಕ್ಟರ್ ಡಿಸೋಜ ಕ್ರಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೊ,ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ, ಬ್ರದರ್ ರೊಲ್ಸನ್ ವೇಗಸ್, ಶಾಲಾ ಪೊಷಕ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪ್ರವೀಣ್,ಶಾಲಾ ಮುಖ್ಯ ಶಿಕ್ಷಕಿಸ ಸಿಸ್ಟರ್ ಅಂತೋನಿ ಮೇರಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಮೇರಿ ಸ್ವಾಗತಿಸಿ ಶಿಕ್ಷಕಿ ವಲ್ಸ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಶಾಂತಿ ಧನ್ಯವಾದ ಅರ್ಪಿಸಿದರು.


ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಂದ ಸಿಸ್ಟರ್ ಗ್ರೇಸಿ ನಿರ್ದೆಶನದ ಯೇಸುವಿನ ಜನನದ ಕುರಿತು ಶಾಲಾ ವಿದ್ಯಾರ್ಥಿಗಳು ನೃತ್ಯರೂಪಕ ಮೂಲಕ ಮಾಡಿ ತೋರಿಸಿದರು.