ಮಂಡೆಕೋಲು ಸಹಕಾರಿ ಸಂಘ ಪೇರಾಲು ಶಾಖೆ ಉದ್ಘಾಟನೆಯ ಆಮಂತ್ರಣ ‌ಬಿಡುಗಡೆ

0

ಮಂಡೆಕೋಲು ಸಹಕಾರಿ ಸಂಘದ ಪೇರಾಲು ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಮಂಡೆಕೋಲು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಈಶ್ವರಚಂದ್ರ ಕೆ ಆರ್ ಹಾಗೂ ಸುರೇಶ್ ಕಣೆಮರಡ್ಕ, ಮೋನಪ್ಪ ನಾಯ್ಕ ಬೇಂಗತ್ತಮಲೆ ಹಾಗೂ ಸಂಘದ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಮತ್ತು ಸಿಬ್ಬಂದಿಗಳು ದೇವಸ್ಥಾನದ ಅರ್ಚಕರು, ಸಂಘದ ಸದಸ್ಯರು ಹಾಜರಿದ್ದರು.