ಚೆನ್ನಕೇಶವ ನಡುತೋಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಆಟೋ ಚಾಲಕ ಮಾಲಕರಾದ ಚೆನ್ನಕೇಶವ ನಡುತೋಟ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಡೆಯಿತು. ಟ್ರಸ್ಟಿನ ಸಂಸ್ಥಾಪಕ ಡಾl ರವಿ ಕಕ್ಕೆಪದವು ಅವರು ದೀಪ ಬೆಳಗಿಸುವುದರ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೃತರ ಬಗ್ಗೆ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಮಾತನಾಡುತ್ತಾ “ದಿವಂಗತ ಚನ್ನಕೇಶವರವರು ಸುಮಾರು 40 ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಆಟೋ ಚಾಲಕರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದವರು .

ಅಂದಿನ ಕಾಲಘಟ್ಟದಲ್ಲಿ ಕೇವಲ ಮೂರು ಆಟೋರಿಕ್ಷಗಳು ಮಾತ್ರ ಸುಬ್ರಹ್ಮಣ್ಯದಲ್ಲಿ ಸೇವೆಯನ್ನು ಸಲ್ಲಿಸುತಿದ್ದವು .ಚೆನ್ನಕೇಶವರ ನಗುಮುಖದ ಸೇವೆಯ ಜನರು ಅಭಾರಿಯಾಗಿದ್ದರು. ಓರ್ವ ಉತ್ತಮ ಕ್ರೀಡಾಪಟು ಹಾಗೂ ಹವ್ಯಾಸಿ ಯಕ್ಷಗಾನ ಆಸಕ್ತರು ಆಗಿದ್ದ ಅವರ ನೆನಪುಗಳನ್ನು ಅವರೊಂದಿಗೆ ಇದ್ದ ಅವರ ಮಿತ್ರರು ಈ ಸಂದರ್ಭದಲ್ಲಿ ನೆನೆಸಿಕೊಳ್ಳುತ್ತಿದ್ದರು. ಎಂದು ನುಡಿನಮನವನ್ನು ಸಲ್ಲಿಸಿದರು. ಡಾ lರವಿ ಕಕ್ಕೆಪದವರು ಮಾತನಾಡುತ್ತಾ “ಆಟೋ ಚಾಲಕರಲ್ಲಿ ಕಂಡಂತಹ ಓರ್ವ ಅಪ್ರತಿಮ ವ್ಯಕ್ತಿ ಚೆನ್ನಕೇಶವರವರು. ಪ್ರಾಮಾಣಿಕ, ದಕ್ಷತೆಯಿಂದ, ನಗುಮುಖದ, ಸೇವೆಯನ್ನು ಸಲ್ಲಿಸುತ್ತಾ ಗುರುತಿಸಿಕೊಂಡವರು ಅವರು. ಹಾಗೂ ನನ್ನೊಂದಿಗೆ ಅವರ ಒಡನಾಟ ಉತ್ತಮವಾಗಿತ್ತು” ಎಂದು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ರಾಮಣ್ಣಗೌಡ ಪದೇಲ ,ಚಂದ್ರ ಕಾಶಿ ಕಟ್ಟೆ, ರಮಾನಂದ ಪದೇಲ ಹಾಗೂ ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ವಿನಯ, ರಮ್ಯ ,ಜಯಶ್ರೀ, ಭಾನುಪ್ರಸಾದ್ ,ಮುಕುಂದ, ದಿನೇಶ್ ಎಣ್ಣೆ ಮಜಲು ಹಾಜರಿದ್ದು ಪುಷ್ಪಾರ್ಚನೆ ಮಾಡಿದರು.