ಇಂದು ಡಿ.31 ಗುತ್ತಿಗಾರಿನಲ್ಲಿ “ಗುಳಿಗ ಶಿವ ಗುಳಿಗ” ಯಕ್ಷಗಾನ

0

ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ವತಿಯಿಂದ ಗುತ್ತಿಗಾರಿನಲ್ಲಿ ಇಂದು ಬೆಳಗ್ಗೆ ಸಾಮೂಹಿಕ ಶನೈಶ್ವರ ಪೂಜೆ ನಡೆದಿದ್ದು ಸಂಜೆ ಗುಳಿಗ ಶಿವ ಗುಳಿಗ ಯಕ್ಷಗಾನ ನಡೆಯಲಿದೆ. ಶ್ರೀ ಕೃಷ್ಣಾ ಭಜನಾ ಮಂದಿರ ಗುತ್ತಿಗಾರು ಇಲ್ಲಿ ಬೆಳಗ್ಗೆ ಶ್ರೀ ಗಣಪತಿ ಹೋಮ, ಬಳಿಕ ಸಾಮೂಹಿಕ ಶನೈಶ್ವರ ಪೂಜೆ ನಡೆದು ಸಂಜೆ ಶ್ರೀ ಕೃಷ್ಣಾ ಭಜನಾ ಮಂಡಳಿ ಗುತ್ತಿಗಾರು ವತಿಯಿಂದ ಭಜನಾ ಕಾರ್ಯ ಕ್ರಮ ನಡೆಯಲಿದೆ.

ಗುತ್ತಿಗಾರು ಹಿ.ಪ್ರಾ.ಶಾಲಾ ಮೈದಾನದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ಕಂದ್ರಪ್ಪಾಡಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು
ಆ ಬಳಿಕ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ವತಿಯಿಂದ “ಗುಳಿಗ ಶಿವ ಗುಳಿಗ” ಯಕ್ಷಗಾನ ನಡೆಯಲಿದೆ .