ಪವನ ವೆಂಕಟ್ರಮಣ ಭಟ್ ಹೃದಯಾಘಾತದಿಂದ ನಿಧನ

0

ಕಳಂಜ ಗ್ರಾಮ ಕೋಟೆಮುಂಡುಗಾರು ನಿವಾಸಿ ಪ್ರಗತಿ ಪರ ಕೃಷಿಕ, ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದ
ಪವನ ವೆಂಕಟ್ರಮಣ ಭಟ್ ಹೃದಯಾಘಾತದಿಂದ ಡಿ.31 ರ ಸಂಜೆ ನಿಧನರಾದರು.

ಸಂಜೆ ತೋಟಕ್ಕೆಂದು ತೆರಳಿದ್ದ ಅವರು, ಹೃದಯಾಘಾತಗೊಂಡು ತೋಟದಲ್ಲಿ ಬಿದ್ದಿದ್ದರೆನ್ನಲಾಗಿದೆ.
ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ವಿಜಯ ಲಕ್ಷ್ಮೀ, ಮಕ್ಕಳಾದ ನ್ಯಾಯವಾದಿ ಕೃಷ್ಣಮೂರ್ತಿ, ಪುತ್ರಿಯರಾದ ಶ್ರೀಮತಿ ಅನುಪಮಾ, ಶ್ರೀಮತಿ ಮಲ್ಲಿಕಾ ಅವರನ್ನು ಅಗಲಿದ್ದಾರೆ.