ಕೋಟೆಮುಂಡುಗಾರು:ವಾಲಿಬಾಲ್ ಪ್ರಥಮ:ಎಸ್. ಕೆ. ವೈ. ಸಿ ಪಟ್ಟೆ, ದ್ವಿತೀಯ:ಸಾಯಿ ಮಧುರಾ ಗುತ್ತಿಗಾರು

0

ಯುವಕ ಮಂಡಲ ರಿ.ಕಳಂಜ ವತಿಯಿಂದ ಡಿ.31 ರಂದು ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ ಕೋಟೆಮುಂಡುಗಾರಿನಲ್ಲಿ ನಡೆದಿದ್ದು ವಾಲಿಬಾಲ್ ನಲ್ಲಿ ಪ್ರಥಮ ಸ್ಥಾನವನ್ನು ಎಸ್. ಕೆ. ವೈ. ಸಿ ಪಟ್ಟೆ ಹಾಗೂ ದ್ವಿತೀಯ ಸ್ಥಾನವನ್ನು ಸಾಯಿ ಮಧುರಾ ಗುತ್ತಿಗಾರು ತಂಡ ಪಡೆಯಿತು. ತ್ರೋಬಾಲ್ ನಲ್ಲಿ ಪ್ರೆಂಡ್ಸ್ ಬಾಳಿಲ ಪ್ರಥಮ, ಶಿವಶಕ್ತಿ ಬಂಟ್ವಾಳ ದ್ವಿತೀಯ ಸ್ಥಾನ ಪಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಶಿವರಾಮ ‌ಕಜೆಮೂಲೆ ವಹಿಸಿದ್ದರು. ಬಹುಮಾನ ವಿತರಣೆಯನ್ನು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸ್ಥಳೀಯರಾದ ಅಶ್ವಿನ್ ಕುಮಾರ್ ಎಂ.ಆರ್ ಮಾಡಿದರು.

ವೇದಿಕೆಯಲ್ಲಿ ಯುವಕ ಮಂಡಲದ ಗೌರವ ಅಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಕ್ರೀಡಾ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದಿನೇಶ್ ಪಾಂಡಿಪಾಲು ಇದ್ದರು. ಲಕ್ಷ್ಮೀಶ ಕಜೆಮೂಲೆ ಸ್ವಾಗತಿಸಿ, ಶಿವರಾಮ ಕಜೆಮೂಲೆ ವಂದಿಸಿದರು.