ಆಲೆಟ್ಟಿ ಸದಾಶಿವ ದೇವಸ್ಥಾನದಿಂದ ಮನೆ ಮನೆಗೆ ಅಯೋಧ್ಯಾ ಮಂತ್ರಾಕ್ಷತೆ ವಿತರಣೆಗೆ ಚಾಲನೆ

0

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಹಾ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಜ.1 ರಂದು ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.


ಬಳಿಕ ಆಲೆಟ್ಟಿ ಪರಿಸರದ ಮನೆ ಮನೆಗೆ ಭೇಟಿ ನೀಡಿ ಪವಿತ್ರ ಮಹಾ ಮಂತ್ರಾಕ್ಷತೆ ಹಾಗೂ ಅಯೋಧ್ಯೆಯ ಶ್ರೀ ರಾಮನ ಭಾವಚಿತ್ರ ಮತ್ತು ಆಮಂತ್ರಣ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಶ್ರೀಪತಿ ಬೈಪಡಿತ್ತಾಯ, ಅರ್ಚಕರು, ವಿ.ಹೆಚ್.ಪಿ. ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಆಲೆಟ್ಟಿ,
ಆಲೆಟ್ಟಿ ದೇವಸ್ಥಾನದ ವ್ಯ .ಸ ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ, ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಬಜರಂಗದಳ ಸಂಚಾಲಕ ಲತೀಶ್ ಗುಂಡ್ಯ, ಮಹಾಬಲ ರೈ ಆಲೆಟ್ಟಿ, ಮಹೇಶ್ ಕುತ್ಯಾಳ, ನವೀನ್ ಕುಮಾರ್ ಆಲೆಟ್ಟಿ, ವಸಂತಆಲೆಟ್ಟಿ,
ರೂಪಾನಂದ ಗುಂಡ್ಯ,ನಳಿನಿ ರೈ ಆಲೆಟ್ಟಿ,
ಯಮುನಾ ಆಲೆಟ್ಟಿ ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.

.