ವೃತ್ತಿಯಿಂದ ನಿವೃತ್ತಿಗೊಂಡ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಸನ್ಮಾನ

0

         ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ಮಾವುತ ಶ್ರೀನಿವಾಸ ಗೌಡರಿಗೆ ಡಾl ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಅಖಿಲ ಭಾರತ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಜಂಟಿಯಾಗಿ ಸನ್ಮಾನವನ್ನು ಏರ್ಪಡಿಸಲಾಯಿತು.  
          ಸನ್ಮಾನಿತರ ಬಗ್ಗೆ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಪ್ರಸ್ತಾವನೆ ಯೊಂದಿಗೆ ಮಾತನಾಡಿದರು .ನಂತರ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಉಮೇಶ ಕೆ.ಎಂ. ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ ಎಚ್.ಎಲ್. ಸನ್ಮಾನಿತರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಲೋಕೇಶ ಬಿ ಎನ್, ಸುಬ್ರಹ್ಮಣ್ಯದ ಪತ್ರಕರ್ತ ಪ್ರಕಾಶ್, ಅಭಿಷೇಕ್ ನಡು ತೋಟ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಪುಷ್ಪ ಕುಮಾರಧಾರ ,ಸೂರ್ಯ ಭಟ್, ಕಾರ್ತಿಕ್ ,ಬೆಳ್ಳಿಯಪ್ಪ ,ರಮ್ಯ ಮುಂತಾದವರು ಉಪಸ್ಥಿತರಿದ್ದರು.