ಐವರ್ನಾಡು : ಮಡ್ತಿಲ ಮನೆತನದ ಪೂಕಳೆ ಗದ್ದೆ ಕೋರಿ

0

ಐವರ್ನಾಡು ಗ್ರಾಮದ ಮಡ್ತಿಲ ಮನೆತನದ ಬಲ್ಲಾಳರ ಕಾಲದ ಪೂಕಳೆ ಗದ್ದೆ ಕೋರಿ ಕಾರ್ಯಕ್ರಮವು ಜ.05 ಮತ್ತು ಜ.06 ರಂದು ನಡೆಯಿತು.
ಜ.05 ರಂದು ರಾತ್ರಿ ನಾಗಣಿಸುವ ಕಾರ್ಯಕ್ರಮ ನಡೆಯಿತು.


ಜ.06 ರಂದು ಬೆಳಿಗ್ಗೆ ನಾಗತಂಬಿಲ ನಂತರ ಉಳ್ಳಾಕುಲು ಕಟ್ಟೆಯಲ್ಲಿ ನಾಗತಂಬಿಲ ನಡೆಯಿತು.
ನಂತರ ಕಂಡತುರವೆ,ಬ್ರಾಣಕೋಲ,ಬಿರ್ಮೆರೆ ನೇಮ ಹಾಗೂ ಎರುಕೋಲಗಳು ಪೂಕಳೆ ಗದ್ದೆ ಕಟ್ಟೆಯಲ್ಲಿ ನಡೆಯಿತು.
ಸಂಜೆ ಪೂಕಳೆಯನ್ನು ಎಲ್ಲರೂ ಸೇರಿ ನೆಡಲಾಯಿತು.


ಈ ಸಂದರ್ಭದಲ್ಲಿ ಅಚಾರಿ,ಭಂಡಾರಿ,ಪೂಜಾರಿ,ಕಾಪಾಡ,ನಲಿಕೆಯವರು ಹಾಗೂ ಪುರೋಹಿತರು,ಮಡ್ತಿಲ ಕುಟುಂಬಸ್ಥರು ಹಾಗೂ ಊರವರ ಸಹಕಾರದೊಂದಿಗೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.