ಅರಂಬೂರು: ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿ ಪೂಜೆ

0

ಅರಂಬೂರು ಮೂಕಾಂಬಿಕಾ ಭಜನಾ ಮಂದಿರದ ಪರಿಸರದಲ್ಲಿ ಸಾರ್ವಜನಿಕ ಶೌಚಾಲಯದ ನಿರ್ಮಾಣಕ್ಕೆ ಇಂದು ಶಾಸಕಿ ಕು.ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.

ಈ ಪರಿಸರದಲ್ಲಿ ವರ್ಷದಲ್ಲಿ ಅನೇಕ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಪ್ರವಾಸಿಗರು ಬರುವುದರಿಂದ ಸಾರ್ವಜನಿಕ ಶೌಚಾಲಯದ ಅವಶ್ಯಕತೆಯ ಕುರಿತು ಸ್ಥಳೀಯ ಪಂಚಾಯತ್ ಸದಸ್ಯರು ಮುತುವರ್ಜಿ ವಹಿಸಿದ್ದರು.


ಇದೀಗ ಆಲೆಟ್ಟಿ ಪಂಚಾಯತ್ ನಿಂದ ನೈರ್ಮಲ್ಯ ಯೋಜನೆಯಡಿಯಲ್ಲಿ ರೂ.3.5 ಲಕ್ಷ ಅನುದಾನದಲ್ಲಿ ಕಾಮಗಾರಿ ಕೆಲಸ ನಡೆಯಲಿದೆ.


ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ, ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಮಾಜಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಅಧ್ಯಕ್ಷ ರತ್ನಾಕರ ರೈ ಅರಂಬೂರು, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಸುನಿಲ್ ಕೇರ್ಪಳ, ಪಂ.ಸದಸ್ಯರಾದ ಸುಧೇಶ್ ಅರಂಬೂರು, ವೇದಾವತಿ ನೆಡ್ಚಿಲು, ಅನಿತಾ ಅರಂಬೂರು ಸ್ಥಳೀಯರಾದ ಚಂದ್ರಶೇಖರ ನೆಡ್ಚಿಲು, ಸುರೇಶ್ ಅರಂಬೂರು, ಜಗದೀಶ್ ಸರಳಿಕುಂಜ,ಅನಿಲ್ ಕೆ.ಸಿ ಪರಿವಾರಕಾನ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.