ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ ಅವರಿಗೆ ಸನ್ಮಾನ

0

ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಸವಾದ್ ಸುಳ್ಯ ಅವರನ್ನು ತೆಕ್ಕಿಲ್ ಶಾಲಾ ವಾರ್ಷಿಕೋತ್ಸವ ಬ್ಲೋಸಂ 2024 ಸಮಾರಂಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಯುವ ಉಧ್ಯಮಿ ಅಶ್ರಪ್ ನಾಯಮ್ಮಾರ್ ಮೂಲ ಕಾಸರಗೋಡು, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ.ಹನೀಪ್, ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಭೂನ್ಯಾಯ ಮಂಡಳಿಯ ಮಾಜಿ ಸದಸ್ಯ ಪಿ.ಎ ಉಮ್ಮರ್ ಹಾಜಿ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಪ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ತೆಕ್ಕಿಲ್ ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ತಾಜ್ ಮೊಹಮ್ಮದ್, ಅಧ್ಯಕ್ಷ ಉನೈಸ್ ಪೆರಾಜೆ, ಶಾಲಾ ಮುಖ್ಯೋಪಾದ್ಯಾಯ ಸಂಪತ್, ಅಬ್ದುಲ್ ಖಾದರ್ ಮ್ಪೊಟ್ಟೆಂಗಾರ್, ಉಬೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.