ಸುಳ್ಯದಲ್ಲಿ ರೋಟರಿ ಸಮುದಾಯ ಭವನದ ಮೇಲ್ಛಾವಣಿ ಉದ್ಘಾಟನೆ

0

ರೋಟರಿ ಕ್ಲಬ್ ಸುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ೨೦೨೩-೨೪ ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನದ ಮೇಲ್ಛಾವಣಿಯ ಉದ್ಘಾಟನೆ ಜ.೧೩ರಂದು ನಡೆಯಿತು.
ರೋಟರಿ ಸಮುದಾಯ ಭವನದ ಮೇಲ್ಛಾವಣಿ ಮತ್ತು ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ ಉದ್ಘಾಟಿಸಿ, “ಉತ್ತಮವಾದ ರೀತಿಯಲ್ಲಿ ಸಭಾಭವನ ಮೂಡಿಬಂದಿದೆ. ರೋಟರಿ ಮಿತ್ರರ ಒಗ್ಗಟ್ಟಿನಿಂದ ಹಾಗೂ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ. ಸಮುದಾಯ ಭವನಕ್ಕೆ ರೂ.೫೦ ಸಾವಿರ ದೇಣಿಕೆ ನನ್ನ ಕಡೆಯಿಂದಲೂ ನೀಡುವುದಾಗಿ ಘೊಷಿಸಿದರು.


ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಝೋನಲ್ ಲೆಫ್ಟಿನೆಂಟ್ ನವೀನ್ ನಾಯಕ್ ,ರೋಟರಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಗಿರಿಜಾಶಂಕರ್ ತುದಿಯಡ್ಕ ಶುಭಹಾರೈಸಿದರು.
ರೋಟರಿ ಜಿಲ್ಲಾ ಯೋಜನೆಯಡಿ ಸುಳ್ಯ ಆಸುಪಾಸಿನ ಅಂಗನವಾಡಿಗಳಿಗೆ ಚಪ್ಪಲ್ ಸ್ಟ್ಯಾಂಡ್ ಹಾಗೂ ಮಿಕ್ಸಿ ವಿತರಣೆ ನಡೆಯಿತು. ಸಾಂಕೇತಿಕವಾಗಿ ಗಾಂಧಿನಗರ, ಬೂಡು ಹಾಗೂ ಕೇರ್ಪಳ ಅಂಗನವಾಡಿಗೆ ವಿತರಿಸಲಾಯಿತು.


ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗರು ಅಧ್ಯಕ್ಷತೆವಹಿಸಿದ್ದರು.
ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಗಿರೀಶ್ ನಾರ್ಕೋಡು ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ನಾರ್ಕೋಡು ಸಭಾಭವನಕ್ಕೆ ಕ್ಲಬ್ ವತಿಯಿಂದ ನೀಡುವ ದೇಣಿಗೆಯ ಚೆಕ್ ನ್ನು ಯೋಜನಾ ಸಮಿತಿ ಅಧ್ಯಕ್ಷ ಸೀತಾರಾಮ ರೈಯವರಿಗೆ ಹಸ್ತಾಂತರ ಮಾಡಿದರು.


ಶಾಸಕರಿಗೆ ಸನ್ಮಾನ : ಕಾರ್ಯಕ್ರಮಕ್ಕೆ ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ನೂತನ ಸಭಾಭವನಕ್ಕೆ ಸಹಕಾರ ನೀಡಿದ ಸವಣೂರು ಸೀತಾರಾಮ ರೈ, ಆನಂದ ಖಂಡಿಗ, ಪ್ರಭಾಕರ ನಾಯರ್, ಹರಿರಾಯ ಕಾಮತ್, ಗಿರಿಜಾಶಂಕರ್ ತುದಿಯಡ್ಕ, ದಯಾನಂದ ಆಳ್ವ, ಡಾ| ಕೇಶವ ಪಿ.ಕೆ, ಸಿ.ಎ.ಗಣೇಶ್ ಭಟ್, ಬೆಳ್ಯಪ್ಪ ಗೌಡ, ಬಾಲಕೃಷ್ಣ ಎಂ., ಲಿಂಗಪ್ಪ ಗೌಡ, ರಾಮಚಂದ್ರ ಆಗ್ರೋ, ಮಹಾಲಕ್ಷ್ಮೀ ಕೊರಂಬಡ್ಕ, ಡಾ| ಪುರುಷೋತ್ತಮ ಕೆ.ಜಿ., ದಳ ಸುಬ್ರಾಯ ಭಟ್, ಎನ್.ಎ.ಜಿತೇಂದ್ರ, ಪ್ರಸನ್ನ ಕಲ್ಲಾಜೆ, ಮಾಧವ ಬಿ.ಟಿ., ಮಧುಸೂದನ ಕೆ, ಎಂ.ಮೀನಾಕ್ಷಿ ಗೌಡ, ಶಾಪಿ ಕುತ್ತಮೊಟ್ಟೆ, ಚಂದ್ರಶೇಖರ ಪೇರಾಲ್, ಗೋಪಿನಾಥ ಎಂ.ಕೆ. ಯವರನ್ನು ಗೌರವಿಸಲಾಯಿತು.


ಕ್ಲಬ್ ಕಾರ್ಯದರ್ಶಿ ರೊ.ಕಸ್ತೂರಿಶಂಕರ, ಯೋಜನಾ ಸಮಿತಿ ಕಾರ್ಯದರ್ಶಿ ಹರಿರಾಯ ಕಾಮತ್ ವೇದಿಕೆಯಲ್ಲಿದ್ದರು.
ಶ್ರೀಮತಿ ಲತಾ ಮಧುಸೂದನ್ ಪ್ರಾರ್ಥಿಸಿದರು. ಯೋಜನಾ ಸಮಿತಿ ಅಧ್ಯಕ್ಷರಾದ ಸಹಕಾರ ರತ್ನ ರೊ.ಸೀತಾರಾಮ ರೈ ಸವಣೂರು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಹರಿರಾಯ ಕಾಮತ್ ವಂದಿಸಿದರು.