ಬಾಳಿಲ ಪರವ ಕುಟುಂಬಸ್ಥರಿಂದ ಎಸ್.ಪಿ. ಬಜನಿಗುತ್ತು ಜಗನ್ನಾಥ ರೈಯವರಿಗೆ ಸನ್ಮಾನ

0

ಬೆಂಗಳೂರಿನ ಗುಪ್ತಚರ ವಿಭಾಗದಲ್ಲಿ ಸುಪರಿಂಡೆಂಟ್
ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ ಬಜನಿಗುತ್ತು ಜಗನ್ನಾಥ ರೈಯವರಿಗೆ ಸನ್ಮಾನ ಕಾರ್ಯಕ್ರಮ ಜ. 13ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಬಾಳಿಲ ವಿಶ್ವನಾಥ ಪರವರ ಮನೆಯಲ್ಲಿ ನಡೆಯಿತು. ಕುಟುಂಬದ ಹಿರಿಯರಾದ ವೆಂಕಪ್ಪ ಪರವ ಸನ್ಮಾನಿಸಿದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮುಗುಪ್ಪು ಕೂಸಪ್ಪ ಗೌಡ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು ಸೇರಿದಂತೆ ಹಾಗೂ ಪರವ ಕುಟುಂಬದ ಸದಸ್ಯರಾದ ಶೇಷಪ್ಪ ಪರವ, ನಾರಾಯಣ ಪರವ ಮತ್ತಿತರರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಎ.ಎಂ. ಸುಧಾಕರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.