ಜಾತ್ರಾ ಸಂತೆಯಲ್ಲಿ ನೈತಿಕ ಪೊಲೀಸ್ ಗಿರಿ ಆರೋಪ

0

ಯುವಕನಿಗೆ ತಂಡದಿಂದ ಹಲ್ಲೆ : ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು

ಸುಳ್ಯ ಜಾತ್ರೆಯ ಸಂತೆಯಲ್ಲಿ ಜನವರಿ 12ರಂದು ಸಂಜೆ ಗುತ್ತಿಗಾರು ಭಾಗದ ಓರ್ವ ಯುವಕನಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿರುವ ಘಟನೆ ವರದಿಯಾಗಿದೆ.

ಸುಳ್ಯ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ಗುತ್ತಿಗಾರು ನಿವಾಸಿ ಜೋಸ್ಬಿನ್ ಬಾಬು ತಮ್ಮ ಸ್ನೇಹಿತರೊಂದಿಗೆ ಜಾತ್ರೆ ವೀಕ್ಷಿಸಲು ಹೋಗಿದ್ದು ಈ ಸಂದರ್ಭ ತಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಿದ್ದರೆಂದೂ ಈ ಸಂದರ್ಭ ಕೆಲವು ಯುವಕರು ಬಂದು ಇದನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಳ್ಯ ಠಾಣೆಗೆ ದೂರು ನೀಡಲಾಗಿದೆ.