ಪದವಿ ಸಿಕ್ಕಿದರೆ ಸಾಲದು ಉತ್ತಮ ಗುಣ ನಡತೆ ಹೊಂದಿರಬೇಕು: ಎಸ್ ಅಂಗಾರ

0

ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬದುಕಿನ ಪಾಠ ಕಲಿಸಿಕೊಟ್ಟಿರುವುದರಿಂದ ಅಂಗಾರ ಎಲ್ಲರ ಮೆಚ್ಚುಗೆಗೆ ಪಾತ್ರರಾಗಲು ಸಾಧ್ಯವಾಗಿದೆ. ಗುರುಗಳಿಗೆ ಸಲ್ಲಿಸಿದ ಗುರುವಂದನೆ ಪ್ರಚಾರಕ್ಕೆ ಮಾಡಿದ ಕಾರ್ಯವಲ್ಲ. ಗುರು ಹಿರಿಯರಿಗೆ ಸಲ್ಲಿಸುವ ಕಾರ್ಯದಿಂದ ವರ ಪಡೆದು ಕೃತಾರ್ಥರಾಗಲು ಸಾಧ್ಯವಿದೆ. ವಿದ್ಯೆ ಬುದ್ದಿ ಒಳ್ಳೆಯ ‌ಗುಣ ಮಟ್ಟದಾಗಿರಲಿ. ಪದವಿ ಸಿಕ್ಕಿದರೆ ಸಾಲದು ಗುಣ ನಡತೆಒಳ್ಳೆಯದಾಗಿರಬೇಕು.ನಾವು ಪಡೆದುಕೊಂಡ ಶಿಕ್ಷಣದಿಂದ ನಾವು ಬೆಳೆಯಬೇಕು ಮತ್ತು ಅದರಿಂದ ಸಮಾಜಕ್ಕೆ ಕೊಡುಗೆನೀಡುವಂತಿರಬೇಕು ಎಂದು ಮಾಜಿ ಸಚಿವ ಹಾಗೂ ಚೊಕ್ಕಾಡಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಸ್.ಅಂಗಾರ ರವರು ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಭಾವನೆಯಿಂದ ಹಿರಿಯರು ಊರಿನಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದಾರೆ.
ಶಿಕ್ಷಣ ಪಡೆದು ಹಲವಾರು ಮಂದಿ ವಿದ್ಯಾರ್ಥಿಗಳು ಬದುಕನ್ನುಕಟ್ಟಿಕೊಂಡಿದ್ದಾರೆ. ಶಾಲೆಗಳನ್ನು ಉಳಿಸಿ ಬೆಳೆಸಿದರೆ ಮುಂದಿನ ಪೀಳಿಗೆಗೆ ಪ್ರಯೋಜನವಿದೆ. ಶಾಲೆಯಲ್ಲಿ ಶಿಸ್ತು ಬದ್ಧ ಶಿಕ್ಷಣ ಸಿಕ್ಕಿದ್ದರಿಂದ ನಾನು ಈ ಮಟ್ಟಕ್ಕೆ ತಲುಪಲು ಸಾಧ್ಯವಾಯಿತು. ನಾನು ಕಲಿತ ಶಾಲೆಗೆ ಒಳಿತಾಗಲಿ ಎಂಬುದು ನನ್ನ ಉದ್ದೇಶವೂಅಪೇಕ್ಷೆಯೂ ಹೌದು ಎಂದು ಹೇಳಿದರು.

ಗುರುವಂದನಾ ಹಾಗೂ ಅಭಿನಂದನಾ ಕಾರ್ಯಕ್ರಮ:

ಸಮಾರೋಪ ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಟಿ ತಿರುಮಲೇಶ್ವರ ಭಟ್, ಲಕ್ಷ್ಮೀಶ ಚೊಕ್ಕಾಡಿ, ಚಂದ್ರಶೇಖರ ಭಟ್ ಕೊಡಪಾಲ, ರಾಜೇಶ್ವರಿ ಸಿ.ವಿ, ಸುಬ್ರಾಯ ಒಣಿಯಡ್ಕ, ಚಂದ್ರಶೇಖರ್ ಮೂಕಮಲೆ, ಜನಾರ್ಧನ ನಾಯರ್ ಕಲ್ಲು ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಹಾಗೂ ಎಸ್. ಎಸ್ .ಎಲ್ .ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಯೋಗ ಸ್ಪರ್ಧೆಯಲ್ಲಿ ರಾಜ್ಯ ಜಿಲ್ಲಾಮಟ್ಟದಲ್ಲಿ ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಪರ ಕಾಮಗಾರಿ ಕೆಲಸವನ್ನು ನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಿ.ಡಿ.ಪಿ.ಓ ಶೈಲಜಾ ಕುಕ್ಕುಜಡ್ಕ, ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ, ಸಾಫ್ಟ್ವೇರ್ ಸ್ಕ್ಯಾನ್ ರೆ ಟೆಕ್ನಾಲಜಿಯ ನಿವೃತ್ತ ಜನರಲ್ ಮ್ಯಾನೇಜರ್ ತಿರುಮಲೇಶ್ವರ ಎಚ್, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಅಮರಮುಡ್ನೂರು ಪಂಚಾಯತ್ ಸದಸ್ಯೆ ದಿವ್ಯ ಮಡಪ್ಪಾಡಿ ಉಪಸ್ಥಿತರಿದ್ದರು.
ಚೊಕ್ಕಾಡಿ ಎಜುಕೇಷನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು, ಉಪಾಧ್ಯಕ್ಷ ಅಣ್ಣಾಜಿ ಗೌಡ ಪೈಲೂರು, ಕಾರ್ಯದರ್ಶಿ ತೇಜಸ್ವಿ ಕಡಪಳ,ಖಜಾಂಜಿ ಹರ್ಷವರ್ಧನ ಬೊಳ್ಳೂರು,ಜತೆ ಕಾರ್ಯದರ್ಶಿ ತಿಮ್ಮಪ್ಪ ಗೌಡ ಕೊಂಡೆಬಾಯಿ, ನಿರ್ದೇಶಕರಾದ ಸತ್ಯಪ್ರಸಾದ್ ಪುಳಿಮಾರಡ್ಕ, ಆನಂದ ಗೌಡ ಚಿಲ್ಪಾರು, ಜಗನ್ನಾಥ ಹಿರಿಯಡ್ಕ, ಎಂ .ಎ ಸುಪ್ರೀತ್ ಮೋಂಟಡ್ಕ, ಭಾಸ್ಕರ ಎಂ.ಆರ್ ಮೇರ್ಕಜೆ, ವೆಂಕಟ್ರಮಣ ಇಟ್ಟಿ ಗುಂಡಿ ಜಿ ದೇರಾಜೆ, ಅರುಣ್ ಕುಮಾರ್ ನಾಯರ್ ಕಲ್ಲು, ಪರಮೇಶ್ವರ ಗೌಡ ಪಡ್ಪು, ಚೊಕ್ಕಾಡಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಯು, ಪ್ರೌಢಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ,ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮಾಯಿಪಡ್ಕ, ಶಾಲಾ ವಿದ್ಯಾರ್ಥಿ ನಾಯಕ ಅಭಿಜಿತ್ ಕೆ, ವಿದ್ಯಾರ್ಥಿ ನಾಯಕಿ ಹಸ್ತ ಕೆ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೊಕ್ಕಾಡಿ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ತೇಜಸ್ವಿ ಕಡಪಳ ವಂದಿಸಿದರು. ಶಿಕ್ಷಕ ನಾರಾಯಣ ಮಾಸ್ತರ್ ಬೊಳ್ಳೂರು ಹಾಗೂ ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ವಿಧ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ:

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ವಿ ಕಡಪಳ ರವರ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಆವರ್ತನ 2024 ರ ಕಾರ್ಯಕ್ರಮವು ನಡೆಯಿತು. ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಕಾರ್ಕಳ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು.

ಸಮಾರೋಪ ಸಮಾರಂಭದ ನಂತರ ಕುದ್ರೋಳಿ ಗಣೇಶ್ ರವರಿಂದ ವಿಸ್ಮಯ ಜಾದೂಪ್ರದರ್ಶನಗೊಂಡಿತು. ಸಭಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರು ಆಗಮಿಸಿದ್ದರು. ರಾತ್ರಿ ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಪ್ರದರ್ಶನವಾಯಿತು. ಸುವರ್ಣ ಮಹೋತ್ಸವ ದ ಸಂದರ್ಭದಲ್ಲಿ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.