ಜ.19 ರಿಂದ 23: ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

0

ಜ. 21 : ಇತಿಹಾಸ ಪ್ರಸಿದ್ಧ ಶ್ರೀ ಭೈರಜ್ಜಿ ನೇಮ

ಗುತ್ತಿಗಾರು ಗ್ರಾಮದ ಕಮಿಲ ಇತಿಹಾಸ ಪ್ರಸಿದ್ಧ ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವಕ್ಕೆ ಜ.15 ರಂದು ಗೊನೆ ಕಡಿಯುವ ಮೂಲಕ ಚಾಲನೆ ದೊರೆತಿದ್ದು, ಜ. 19 ರಂದು ಮಧ್ಯಾಹ್ನ ಮೊಗ್ರ ದೊಡ್ಡಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ನಡೆಯಲಿದೆ. ಅದೇ ದಿನ ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಹೊರಡಲಿದೆ. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಮಿಲ-ಮೊಗ್ರ-ಬಳ್ಳಕ್ಕ ಒಕ್ಕೂಟ ಇವರ ಸಹಯೋಗದಲ್ಲಿ ಭಜನಾ ತರಬೇತಿ ಶಿಬಿರ ಉದ್ಘಾಟನೆಗೊಳ್ಳಲಿದೆ. ತರಬೇತುದಾರರಾಗಿ ರಮೇಶ್ ಮೆಟ್ಟಿನಡ್ಕ ಉಪಸ್ಥಿತರಿರುವರು. ಇದೇ ಸಂದರ್ಭ ಶ್ರೀದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಜ. 20 ರಂದು ಬೆಳಿಗ್ಗೆ ಶ್ರೀ ಉಳ್ಳಾಕುಲು ನೇಮ, ನಂತರ ಶ್ರೀ ಕುಮಾರ ನೇಮ ನಡೆಯಲಿದೆ. ಸಂಜೆ ಉಳ್ಳಾಕುಲು ಭಂಡಾರ ಹೊರಟು, ಶ್ರೀ ಪುರುಷ ದೈವದ ನೇಮ, ರಾತ್ರಿ ಶ್ರೀ ರುದ್ರಚಾಮುಂಡಿ ನೇಮ, ಶ್ರೀ ಮಲೆಚಾಮುಂಡಿ ನೇಮ ನಡೆಯಲಿದೆ.
ಜ. 21 ರಂದು ಬೆಳಿಗ್ಗೆ ಇತಿಹಾಸ ಪ್ರಸಿದ್ಧ ಶ್ರೀ ಭೈರಜ್ಜಿ ನೇಮ ನಡೆದು, ಬಳಿಕ ಭಂಡಾರ ಹೊರಡಲಿದೆ. ಜ.22ರಂದು ಬೆಳಿಗ್ಗೆ ನಡಾವಳಿ ಸ್ಥಾನದಿಂದ ಮೂವ ಮಾಳಿಗೆಗೆ ಭಂಡಾರ ಹೊರಟು ರಾತ್ರಿ ಮೂವ ಮಾಳಿಗೆಯಿಂದ ರಾಜಾಂಗಣಕ್ಕೆ ಭಂಡಾರ ಹೊರಡಲಿದೆ. ಜ.23 ರಂದು ಬೆಳಿಗ್ಗೆ ಬ್ರಹ್ಮರ ನೇಮ, ರಾಜ್ಯನ್ ದೈವ ಮತ್ತು ಉಪದೈವಗಳ ನೇಮ ನಡೆಯಲಿದೆ. ನಡೆದು, ಬಳಿಕ ಭಂಡಾರ ಹೊರಡಲಿದೆ.