ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆ

0

ಆಲೆಟ್ಟಿ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ವೀಣಾವಸಂತ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಜ.16 ರಂದು ನಡೆಯಿತು.

ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಪಂ.ಸದಸ್ಯೆ ಗೀತಾ ಕೋಲ್ಚಾರು ರವರನ್ನು ಅಭಿನಂದಿಸಲಾಯಿತು.
ಕುಡಿಯುವ ನೀರಿನ ಬಿಲ್ ಕಲೆಕ್ಟರ್ ವೇತನ ಪರಿಷ್ಕರಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ದೊಡ್ಡ ಗ್ರಾಮವಾಗಿರುವುದರಿಂದ ಈಗ ನೀಡುತ್ತಿರುವ ವೇತನ ಖರ್ಚಿಗೆ ಸರಿಹೊಂದುವುದು. ಮಾನವೀಯತೆ ದೃಷ್ಟಿಯಿಂದ ದಿನ ಒಂದಕ್ಕೆ 400 ರಂತೆ ವೇತನ ಕೊಡುವಂತೆ ಸತ್ಯ ಕುಮಾರ್ ಆಡಿಂಜ ಒತ್ತಾಯಿಸಿದರು.

ಅಭಿವೃದ್ಧಿ ಪರ ಚರ್ಚೆಯಾಗಲಿ ಹೊರತು ಸಿಬ್ಬಂದಿ ವೇತನದ ಬಗ್ಗೆ ಪ್ರತಿ ಸಭೆಯಲ್ಲಿ ಚರ್ಚಿಸಿ ಕಾಲಹರಣ ಮಾಡುವುದು ಬೇಡ ಅಧ್ಯಕ್ಷರು ಅಂತಿಮ ಹಂತದ ನಿರ್ಣಯ ಮಾಡಿ ಎಂದು ಮುತ್ತಪ್ಪ ಪೂಜಾರಿ ಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ನೀರಿನ ಬಿಲ್ ಸಂಗ್ರಹದಲ್ಲಿ ಕಡಿಮೆಯಾಗಿರುವುದರಿಂದ ಬಂಡವಾಳದ ಕೊರತೆಯಾಗಿದೆ. ಸದಸ್ಯರು ಒಮ್ಮತದ ಅಭಿಪ್ರಾಯದ ಮೇಲೆ ವೇತನ ಪರಿಷ್ಕರಣೆ ಮಾಡುವುದಾಗಿ ಅಧ್ಯಕ್ಷರು ‌ತಿಳಿಸಿದರು.

ಉದ್ಯೋಗ ಖಾತರಿಯ ವಿಶೇಷ ಗ್ರಾಮಸಭೆಯಲ್ಲಿ ಲೆಕ್ಕ ಪರಿಶೋಧಕರು ಬೀದಿ ದೀಪ ದೈವಸ್ಥಾನದ ವಠಾರದಲ್ಲಿ ಅಳವಡಿಸಿರುವುದನ್ನು ತೆಗೆಸುವಂತೆ ಸೂಚಿಸಿದ್ದಾರೆ ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸುವಂತೆ ಧರ್ಮಪಾಲ ವಿಷಯ ಪ್ರಸ್ತಾಪಿಸಿದರು.
ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಇದನ್ನು ದುರಸ್ತಿ ಪಡಿಸುವಂತೆ ಸತ್ಯ ಕುಮಾರ್ ಆಡಿಂಜ ಒತ್ತಾಯಿಸಿದರು.
ಬೀದಿ ದೀಪಗಳ ದುರಸ್ತಿ ಪಡಿಸುವಂತೆ ಸುಧೇಶ್ ಅರಂಬೂರು ರವರಿಗೆ ಜವಬ್ದಾರಿ ವಹಿಸುವಂತೆ ಸೂಚಿಸಲಾಯಿತು.

ನಾಗಪಟ್ಟಣದ ಬಳಿ ತ್ಯಾಜ್ಯ ಸುರಿದಿರುವ ವ್ಯಕ್ತಿ ಯ ಬಗ್ಗೆ ತಿಳಿಸಬೇಕು. ಪ್ರಕರಣದ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಚಂದ್ರಕಾಂತ ನಾರ್ಕೋಡು ಪ್ರಶ್ನಿಸಿದರು.

ನಗರದ ತ್ಯಾಜ್ಯವನ್ನು ಗುತ್ತಿಗೆದಾರ ಕುಮಾರ್ ಎಂಬವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಸುರಿದಿರುವುದು.
ಪಂಚಾಯತ್ ವತಿಯಿಂದ ದಂಡ ವಿಧಿಸಿ ತ್ಯಾಜ್ಯ ತೆಗೆಸುವ ಕಾರ್ಯ ಮಾಡಿಸಿದ್ದೇವೆ.
5 ಸಾವಿರ ದಂಡ ಪಾವತಿಸಿದ್ದಾರೆ. ಬಾಕಿ ಉಳಿದ ಮೊತ್ತ ಪಾವತಿಸಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.
ಕಲ್ಚೆರ್ಪೆ ಘನ ತ್ಯಾಜ್ಯ ಘಟಕದಲ್ಲಿ ಅಳತೆ ಮಾಡಿಸಿ ಕಂಪೌಂಡು ನಿರ್ಮಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಕಲ್ಚೆರ್ಪೆ ಘನತ್ಯಾಜ್ಯ ಘಟಕದ ಜಂಟಿ ಸರ್ವೆ ಮಾಡಿಸುವಂತೆ ಮುತ್ತಪ್ಪ ಪೂಜಾರಿ ಪ್ರಸ್ತಾಪಿಸಿದರು.

ಸಾಕು ದನಗಳು ರಸ್ತೆಯಲ್ಲಿ ಮಲಗಿರುವುದರಿಂದ ವಾಹನ ಸವಾರರಿಗೆ ಸಮಸ್ಯೆಗಳಾಗುತ್ತಿವೆ.

ಮಾಣಿಮರ್ದು ಸಂಪರ್ಕ ರಸ್ತೆಯಲ್ಲಿ ಕಾಲು ಸಂಕ ರಚನೆ ಬಗ್ಗೆ ನಿರಾಪೇಕ್ಷಣಾ ಪತ್ರ ನೀಡುವ ಬಗ್ಗೆ ಅರಣ್ಯ ಮತ್ತು ಲೋಕೋಪಯೋಗಿ
ಜಂಟಿ ಇಲಾಖೆಗಳ ಉಪಸ್ಥಿತಿಯಲ್ಲಿ
ಸಭೆ ನಡೆಸಿ ತೀರ್ಮಾನಿಸಬೇಕು.
ಕಳೆದ ಸಭೆಯಲ್ಲಿ ನಿರ್ಣಯ ಮಾಡಿದ್ದು ಇಲಾಖೆಗೆ
ಪತ್ರ ಬರೆಯಲು‌ ತಡಮಾಡಿರುವ ಕುರಿತು ಪಿ.ಡಿ.ಒ ರವರನ್ನು ಧರ್ಮಪಾಲ ಕೆ ತರಾಟೆಗೆ ತ್ತಿಕೊಂಡರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ಪಿ.ಡಿ.ಒ ಸೃಜನ್ ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯ ರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯ ಕುಮಾರ್ ಆಡಿಂಜ, ಶಿವಾನಂದ ರಂಗತ್ತಮಲೆ, ಸತ್ಯ ಪ್ರಸಾದ್ ಗಬ್ಬಲ್ಕಜೆ, ಧರ್ಮಪಾಲ ಕೊಯಿಂಗಾಜೆ, ಚಂದ್ರಕಾಂತ ನಾರ್ಕೋಡು, ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು,
ಗೀತಾ ಕೋಲ್ಚಾರು, ಶಂಕರಿ ಕೊಲ್ಲರಮೂಲೆ, ವೇದಾವತಿ ನೆಡ್ಚಿಲು, ಭಾಗೀರಥಿ ಪತ್ತುಕುಂಜ, ಶಶಿಕಲಾ ದೋಣಿಮೂಲೆ, ಶಂಕರಿ ಕೊಲ್ಲರಮೂಲೆ, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ ಬಿ, ಅನಿತಾ ಅರಂಬೂರು ಉಪಸ್ಥಿತರಿದ್ದರು.