ಸುಬ್ರಹ್ಮಣ್ಯ: ರಸ್ತೆಯಲ್ಲೇ ಪಾರ್ಕಿಂಗ್ ಮಾಡುತ್ತಿರುವ ಯಾತ್ರಾರ್ಥಿಗಳು

0

ಪಾರ್ಕಿಂಗ್ ಸ್ಥಳ ಖಾಲಿ ಖಾಲಿ

ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು, ವಾಹನ ದಟ್ಟಣೆಯೂ ಹೆಚ್ಚಿದೆ.

ಇದರಿಂದಾಗಿ ಸುಬ್ರಹ್ಮಣ್ಯ ಮುಖ್ಯರಸ್ತೆಯ ಇಕ್ಕೆಲಗಳಲ್ಲೂ ವಾಹನ ಪಾರ್ಕಿಂಗ್ ಮಾಡಲಾಗಿದ್ದು ಸಂಚಾರಕ್ಕೆ ತೊಡಕು ಉಂಟಾಗಿದೆ. ಆದರೆ ಆಂಜನೇಯ ದೇವಸ್ಥಾನದ ಬಳಿ ಇರುವ ದೊಡ್ಡ ಪಾರ್ಕಿಂಗ್ ಸ್ಥಳ ಮಾತ್ರ ಖಾಲಿ ಬಿದ್ದಿದೆ, ಇದರಿಂದಾಗಿ ಪಾದಾಚಾರಿಗಳು ಕಷ್ಟ ಪಡುವಂತಾಗಿದೆ.