ಶ್ರೀಮತಿ ದೇವಕಿ ಅಲೆಕ್ಕಾಡಿಯವರ ಶ್ರದ್ಧಾಂಜಲಿ ಕಾರ್ಯಕ್ರಮ

0


ಅಲೆಕ್ಕಾಡಿ ತರವಾಡು ಮನೆತನದ ಹಿರಿಯರಾದ ಶ್ರೀಮತಿ ದೇವಕಿ ಅವರು ಜ.5ರಂದು ನಿಧನರಾಗಿದ್ದು, ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ವೈಕುಂಠ ಸಮಾರಾಧನೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಜ. 15ರಂದು ನಡೆಯಿತು.


ಹೈಕೋರ್ಟಿನ ಹಿರಿಯ ನ್ಯಾಯವಾದಿ ವಸಂತ ಎ. ಅಲೆಕ್ಕಾಡಿಯವರು ಮಾತನಾಡಿ ಮನುಷ್ಯರಾಗಿ ಹುಟ್ಟಿ ದೇವರಂತೆ ಬಾಳಿ ಬದುಕಿದವರು ಶ್ರೀಮತಿ ದೇವಕಿಯವರು ಎಂದು ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಪುತ್ರ ಸಂತೋಷ್ ಕುಮಾರ್ ಅಲೆಕ್ಕಾಡಿ, ಸೊಸೆ ಶ್ರೀಮತಿ ಯಶೋಧ ಸಂತೋಷ್ ಅಲೆಕ್ಕಾಡಿ, ಪುತ್ರಿಯರಾದ ಶ್ರೀಮತಿ ಬಬಿತ ಶ್ರೀನಿವಾಸ ಅಲೆಕ್ಕಾಡಿ, ಶ್ರೀಮತಿ ಮಮತಾ ಜಗನ್ನಾಥ ಮುಕ್ಕೂರು ಅಲೆಕ್ಕಾಡಿ, ಪುತ್ರ ಸನತ್ ಕುಮಾರ್ ಅಲೆಕ್ಕಾಡಿ, ಮೊಮ್ಮಕ್ಕಳಾದ ನೂತನ್ ಎಸ್. ಅಮೀನ್, ಅನಘ ಸುಶೀಲ್, ನಿಧಿ ಎಸ್ .,ನಿರೀಕ್ಷಿತ್ ಎಸ್.ಎ. ಹಾಗೂ ಅಲೆಕ್ಕಾಡಿ ಕುಟುಂಬಸ್ಥರು, ಬಂಧು ಮಿತ್ರರು ಹಿತೈಷಿಗಳು ಉಪಸ್ಥಿತರಿದ್ದರು.