ಸಂಪಾಜೆ : ರಾಜನ್ ದೈವ ಶಿರಾಡಿ ಒಂಟಿ ನೇಮೋತ್ಸವದ ಪೂರ್ವಭಾವಿ ಸಭೆ

0

ಜ. 25 ರಂದು ನಡೆಯಲಿರುವ ಸಂಪಾಜೆ ಶ್ರೀ ರಾಜನ್ ದೈವ ಶಿರಾಡಿ ದೈವದ ಒಂಟಿನೇಮೋತ್ಸವದ ಪೂರ್ವಭಾವಿ ಸಭೆಯು ಜ.14 ರಂದು ಕುಮಾರ್ ಚಿದ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕಳೆದ ಪತ್ತನಾಜೆಯ ಆಯ-ವ್ಯಯ, ಹೊಸ ಆಡಳಿತ ಮಂಡಳಿ ಆಯ್ಕೆ ಮಾಡುವ ವಿಷಯದ ಬಗ್ಗೆ ಮತ್ತು ಇತರ ವಿಷಯಗಳನ್ನು ಚರ್ಚಿಸಲಾಯಿತು.

ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಮಕೃಷ್ಣ ಕುಕ್ಕಂದೂರು, ಉಪಾಧ್ಯಕ್ಷರಾಗಿ ನಾರಾಯಣ ಕುಕ್ಕೇಟಿ, ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಜೊತೆ ಕಾರ್ಯದರ್ಶಿ ವಿಜಯ್ ಕನ್ಯಾನ, ಸಂಘಟನಾ ಕಾರ್ಯದರ್ಶಿ ರಚನ್ ಕಟೀಲ್, ಖಜಾಂಜಿ ಶ್ರೀಪಾದ್ ಹೊಸಮನೆ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೈವಕ್ಕೆ ಸಂಬಂಧ ಪಟ್ಟ ಮನೆತನದವರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.