ಮಂಡೆಕೋಲು ಕನ್ಯಾನದಲ್ಲಿ ಆನೆಗಳ ಗುಂಪಿನಿಂದ ಬೇರ್ಪಟ್ಟಿರುವ ಮರಿಯಾನೆ

0

ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಗುಂಪು ನಿರಂತರವಾಗಿ ಸಂಚಾರ ನಡೆಸುತಿದ್ದು, ಇಂದು ಬೆಳಗ್ಗೆ ಕನ್ಯಾನ ಶಾಲೆಯ ಪಕ್ಕದಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆಯೊಂದು ಕಂಡು ಬಂದಿದೆ.

ವಿಷಯ ತಿಳಿದು ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ಮರಿಯಾನೆಯನ್ನು ವಶಕ್ಕೆ ಪಡೆದಿದ್ದು, ಆನೆಗಳ ಗುಂಪುನೊಂದಿಗೆ ಸೇರಿಸಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿದುಬಂದಿದೆ.